ಸುದ್ದಿ ಸಂಕ್ಷಿಪ್ತ

ದಸರಾ ಚಲನಚಿತ್ರೋತ್ಸವ : ಕಿರುಚಿತ್ರಗಳ ಆಹ್ವಾನ

ಹಾಸನ (ಅ.2): ದಸರಾ ಮಹೋತ್ಸವ-2018 ರ ಅಂಗವಾಗಿ ದಸರಾ ಚಲನಚಿತ್ರೋತ್ಸವ ಉಪಸಮಿತಿ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿವತಿಯಿಂದ ಕಿರುಚಿತ್ರಗಳ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಿರುಚಿತ್ರಗಳ ಸ್ಪರ್ಧೆ ಏರ್ಪಡಿಸಲಾಗಿದೆ.

ಕಿರುಚಿತ್ರವು 5 ನಿಮಿಷಗಳ (300 ಸೆಕೆಂಡುಗಳು) ಅವಧಿಗೆ ಸೀಮಿತವಾಗಿ ನಿರ್ಮಿಸಿರುವ ಕಿರುಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಅತ್ಯತ್ತಮ 3 ಕಿರುಚಿತ್ರಗಳಿಗೆ ಪ್ರಮಾಣ ಪತ್ರ ಮತ್ತು ಸ್ಮರಣಿಕೆ ನೀಡಿ ಗೌರವ ಸಲ್ಲಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲು ದಿನಾಂಕ: 07-10-2018 ರ ಭಾನುವಾರ ಸಂಜೆ: 6.00 ಗಂಟೆಯ ವರೆಗೆ ಇ-ಮೇಲ್‍ಗೆ ಕಳುಹಿಸಲು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ: ಡಾ|| ಬಿ.ಶ್ರೀಕಂಠಾಚಾರ್, ದೂರವಾಣಿ ಸಂಖ್ಯೆ: 9448108831 ಸಂಪರ್ಕಿಸಲು ಮೈಸೂರು ದಸರಾ ಚಲನಚಿತ್ರೋತ್ಸವ ಉಪಸಮಿತಿಯ ಕಾರ್ಯದರ್ಶಿ ಅವರು ಕೋರಿದ್ದಾರೆ. (ಎನ್.ಬಿ)

Leave a Reply

comments

Related Articles

error: