ಕರ್ನಾಟಕಪ್ರಮುಖ ಸುದ್ದಿ

ಜಿಯೋ ಲಾಂಚ್ ಮಾಡಿದೆ ವರ್ಷದ ಆಫರ್

ಬೆಂಗಳೂರು (ಅ.3): ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬಿರುಗಾಳಿ ಎಬ್ಬಿಸಿರುವ ಜಿಯೋ, ಇದೀಗ ತನ್ನ ಬಳಕೆದಾರರಿಗೆ ಮಾರುಕಟ್ಟೆಯಲ್ಲಿಯೇ ಉತ್ತಮ ಎನ್ನಬಹುದಾದ ಆಫರ್ ನೀಡಿದೆ.

ಇಷ್ಟು ದಿನ ಕೇವಲ ಮೂರು ತಿಂಗಳಿಗೆ ರಿಚಾರ್ಜ್ ಮಾಡಿಸಿಕೊಳ್ಳುತ್ತಿದ್ಷವರಿಗೆ ವರ್ಷದ ಆಫರ್ ಘೋಷಣೆ ಮಾಡಿದ್ದು, ಈ ಮೂಲಕ ತನ್ನ ಬಳಕೆದಾರಿಗೆ ಅನುಕೂಲ ಕೊಟ್ಟು ಗ್ರಾಹಕರನ್ನು ಹಿಡಿದಿಡುವ ಪ್ರಯತ್ನ ಮಾಡಿದೆ.

ಜಿಯೋ ಹೊಸದಾಗಿ ಲಾಂಚ್ ಮಾಡಲು ಮುಂದಾಗಿರುವ ಪ್ಲಾನ್‌ನಿಂದ ಇತರೆ ಕಂಪನಿಗಳಿಗೆ ಭಾರೀ ನಷ್ಟವಾಗಲಿದೆ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಸ್ಪರ್ಧೆಯನ್ನು ಕಾಣಬಹುದಾಗಿದ್ದು, ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ಎಲ್ಲ ಟೆಲಿಕಾಂ ಕಂಪನಿಗಳು ದೊಡ್ಡ ಮಟ್ಟದ ಆಫರ್ ನೀಡುತ್ತಿದೆ.

ಹೀಗಿವೆ ಹೊಸ ಪ್ಲಾನ್‍ಗಳು: ಜಿಯೋ ತನ್ನ ಬಳಕೆದಾರರಿಗೆ ಒಮ್ಮೆಗೆ ನಾಲ್ಕು ದೊಡ್ಡ ಪ್ಲಾನ್‌ಗಳನ್ನು ಪರಿಚಯ ಮಾಡಲು ಮುಂದಾಗಿದೆ. ಇದರಲ್ಲಿ ರೂ.999 ಪ್ಲಾನ್, ರೂ.1999 ಪ್ಲಾನ್, ರೂ.4999 ಪ್ಲಾನ್ ಹಾಗೂ ರೂ.9999 ಪ್ಲಾನ್ ಅನ್ನು ಲಾಂಚ್ ಮಾಡಿದ್ದು, ಈ ಎಲ್ಲಾ ಪ್ಲಾನ್‌ಗಳು ಹೆಚ್ಚು ವ್ಯಾಲಿಡಿಟಿಯನ್ನು ಹೊಂದಿದ್ದು, ಬಳಕೆದಾರರಿಗೆ ದೊಡ್ಡ ಮಟ್ಟದಲ್ಲಿ ಸಹಾಯವನ್ನು ಮಾಡಲಿದೆ.

ರೂ.999 ಜಿಯೋ ಪ್ಲಾನ್ : ಜಿಯೋ ಲಾಂಚ್ ಮಾಡಿರುವ ರೂ.999 ಪ್ಲಾನ್‌ನಲ್ಲಿ ಬಳಕೆದಾರರಿಗೆ ದೊಡ್ಡ ಮಟ್ಟದಲ್ಲಿ ಲಾಭವಾಗಲಿದ್ದು, ಇದರಲ್ಲಿ ಬಳಕೆದಾರರಿಗೆ 90 ದಿನಗಳ ವ್ಯಾಲಿಡಿಟಿಯೂ ದೊರೆಯಲಿದೆ. ಅಲ್ಲದೇ 60 GB ಡೇಟಾ ದೊರೆಯಲಿದ್ದು, ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವು ಲಭ್ಯವಿದೆ. ಇದಲ್ಲದೇ ನಿತ್ಯ 100 SMS ಕಳುಹಿಸುವ ಅವಕಾಶವನ್ನು ಈ ಪ್ಲಾನ್‌ನಲ್ಲಿ ಮಾಡಿಕೊಡಲಾಗಿದೆ.

ರೂ.1999 ಜಿಯೋ ಪ್ಲಾನ್ : ಜಿಯೋ ಲಾಂಚ್ ಮಾಡಿರುವ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಒಟ್ಟು 180 ದಿನಗಳ ವ್ಯಾಲಿಡಿಟಿಯೂ ದೊರೆಯಲಿದ್ದು, ಒಟ್ಟು 125 GB ಡೇಟಾ ಬಳಕೆಗೆ ಲಭ್ಯವಿರಲಿದೆ. ಇದಲ್ಲದೇ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವು ಲಭ್ಯವಿದೆ. ಇದಲ್ಲದೇ ನಿತ್ಯ 100 SMS ಕಳುಹಿಸುವ ಅವಕಾಶವನ್ನು ಈ ಪ್ಲಾನ್‌ನಲ್ಲಿ ಮಾಡಿಕೊಡಲಾಗಿದೆ.

ರೂ.4999 ಜಿಯೋ ಪ್ಲಾನ್ : ಜಿಯೋ ಲಾಂಚ್ ಮಾಡಿರುವ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಒಟ್ಟು 360 ದಿನಗಳ ವ್ಯಾಲಿಡಿಟಿಯೂ ದೊರೆಯಲಿದ್ದು, ಒಟ್ಟು 350 GB ಡೇಟಾ ಬಳಕೆಗೆ ಲಭ್ಯವಿರಲಿದೆ. ಇದಲ್ಲದೇ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವು ಲಭ್ಯವಿದೆ. ಇದಲ್ಲದೇ ನಿತ್ಯ 100 SMS ಕಳುಹಿಸುವ ಅವಕಾಶವನ್ನು ಈ ಪ್ಲಾನ್‌ನಲ್ಲಿ ಮಾಡಿಕೊಡಲಾಗಿದೆ.

ರೂ.1999 ಜಿಯೋ ಪ್ಲಾನ್ : ಜಿಯೋ ಲಾಂಚ್ ಮಾಡಿರುವ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಒಟ್ಟು 360 ದಿನಗಳ ವ್ಯಾಲಿಡಿಟಿಯೂ ದೊರೆಯಲಿದ್ದು, ಒಟ್ಟು 750 GB ಡೇಟಾ ಬಳಕೆಗೆ ಲಭ್ಯವಿರಲಿದೆ. ಇದಲ್ಲದೇ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವು ಲಭ್ಯವಿದೆ. ಇದಲ್ಲದೇ ನಿತ್ಯ 100 SMS ಕಳುಹಿಸುವ ಅವಕಾಶವನ್ನು ಈ ಪ್ಲಾನ್‌ನಲ್ಲಿ ಮಾಡಿಕೊಡಲಾಗಿದೆ.

(ಎನ್.ಬಿ)

Leave a Reply

comments

Related Articles

error: