ದೇಶಪ್ರಮುಖ ಸುದ್ದಿ

ವೇದಿಕೆಯಲ್ಲೇ ಪುದುಚೇರಿ ಉಪರಾಜ್ಯಪಾಲೆ – ಶಾಸಕರ ವಾಗ್ವಾದ!

ಪುದುಚೇರಿ (ಅ.3): ಪುದುಚೇರಿ ಉಪರಾಜ್ಯಪಾಲೆ ಕಿರಣ್ ಬೇಡಿ ಅವರು ಅಣ್ಣಾ ಡಿಎಂಕೆ ಶಾಸಕರೊಬ್ಬರ ಜತೆ ವೇದಿಕೆಯಲ್ಲೇ ವಾಗ್ದಾದ ನಡೆಸಿದ್ದಾರೆ!

ಪುದುಚೇರಿಯ ಉಪ್ಪಳಂ ಎಂಬಲ್ಲಿ ಮಂಗಳವಾರ ಗಾಂಧೀ ಜಯಂತಿ ನಿಮಿತ್ತ ನಡೆದ ಸಮಾರಂಭದಲ್ಲಿ ಮಾತನಾಡಿದ ಅಣ್ಣಾ ಡಿಎಂಕೆ ಶಾಸಕ ಎ. ಅನ್ಬಳಗನ್ ಅವರು, ಉಪರಾಜ್ಯಪಾಲರಿಂದ ನಮಗೆ ತೊಂದರೆಯಾಗುತ್ತಿದೆ, ನನ್ನ ಕ್ಷೇತ್ರದ ಒಂದೇ ಒಂದು ಅಭಿವೃದ್ಧಿ ಕೆಲಸದ ಕಡತವನ್ನೂ ಅವರು ಪಾಸು ಮಾಡಿಲ್ಲ ಎಂದು ಹೇಳಿ ಕಿರಣ್ ಬೇಡಿ ಅವರ ಬಳಿ ಸಹಿಗಾಗಿ ಬಾಕಿ ಇರುವ ಕಾಮಗಾರಿಗಳ ಪಟ್ಟಿಯನ್ನು ಓದತೊಡಗಿದರು.

ಈ ವೇಳೆ ಮಧ್ಯಪ್ರವೇಶಿಸಿದ ಉಪರಾಜ್ಯಪಾಲೆ ಕಿರಣ್ ಬೇಡಿ ಅವರು, ಶಾಸಕನನ್ನು ಸಮಧಾನಿಸಲು ಯತ್ನಿಸಿದರು. ಆದರೆ ಅನ್ಬಳಗನ್ ಅವರು ಉಪರಾಜ್ಯಪಾಲರ ಮಾತಿಗೆ ಕಿವಿಗೊಡದೆ ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿದರು.

ಇದರಿಂದ ಕೆರಳಿದ ಬೇಡಿ ಅವರು, ‘ಮೈಕ್ ಬಂದ್ ಮಾಡಿ’ ಎಂದು ಪೊಲೀಸರಿಗೆ ಬೇಡಿ ಸೂಚಿಸಿದರು. ಇದರಿಂದ ಸಿಟ್ಟಿಗೆದ್ದ ಅನ್ಬಳಗನ್, ಬೇಡಿ ಅವರತ್ತ ವೇದಿಕೆಯಲ್ಲೇ ಕೂಗಾಡಿದರು. ಇದಕ್ಕೆ ಪ್ರತಿಯಾಗಿ ಬೇಡಿ ಕೂಡ ಕೂಗಾಡಿ, ವೇದಿಕೆಯಿಂದ ಕೆಳಗಿಳಿಯುವಂತೆ ಶಾಸಕರಿಗೆ ಸೂಚಿಸಿದರು.

ಉಪರಾಜ್ಯಪಾಲರನ್ನು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಹಿಂದೆಂದೂ ನಡೆದಿರಲಿಲ್ಲ ಮತ್ತು ಉಪರಾಜ್ಯಪಾಲರೂ ಕೂಡ ಶಾಸಕರಿಗೆ ಗದರಿದ್ದು, ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಇಂತಹ ಪ್ರಸಂಗ ಎದುರಾದ ಬಗ್ಗೆ ಜನತೆ ಬೇಸರ ವ್ಯಕ್ತಪಡಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: