
ದೇಶ
ಯೆಮೆನ್ನಲ್ಲಿ ಒತ್ತೆಯಾಳಾಗಿರುವ ಭಾರತೀಯನ ರಕ್ಷಣೆಗೆ ಕ್ರಮ: ಸಚಿವೆ ಸುಷ್ಮಾ ಸ್ವರಾಜ್ ಭರವಸೆ
ನವದೆಹಲಿ: ಯೆಮೆನ್ನಲ್ಲಿ ಒತ್ತೆಯಾಳಗಾಗಿರುವ ಭಾರತೀಯ ಕ್ಯಾಥೋಲಿಕ್ ಫಾದರ್ ಥಾಮಸ್ ಅವರನ್ನು ದೇಶಕ್ಕೆ ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಫಾ.ಟಾಮ್ ಅವರು ಸಹಾಯ ಕೋರಿ ಯೂಟ್ಯೂಬ್ನಲ್ಲಿ ಹಾಕಿರುವ ವಿಡಿಯೋವನ್ನು ನಾನು ನೋಡಿದ್ದೇನೆ. ಅವರು ಭಾರತೀಯ ಪ್ರಜೆಯಾಗಿದ್ದು, ಪ್ರತಿಯೊಬ್ಬ ಭಾರತೀಯ ಪ್ರಜೆಯ ಜೀವವು ನಮಗೆ ಮುಖ್ಯ. ಅವರನ್ನು ಬಂಧಮುಕ್ತರಾಗಿಸಲು ಯಾವ ಕ್ರಮಕ್ಕೂ ನಾವು ಸಿದ್ಧ ಎಂದು ಅವರು ಹೇಳಿದ್ದಾರೆ.
ಫಾದರ್ ಟಾಮ್ ಕೇರಳ ಮೂಲದವರಾಗಿದ್ದು, ಈ ವರ್ಷಾರಂಭದಲ್ಲಿ ಯೆಮೆನ್ನ ಐಸಿಸ್ ಉಗ್ರರು ಇವರನ್ನು ಬಂಧನದಲ್ಲಿರಿಸಿದ್ದಾರೆ ಎನ್ನಲಾಗಿದೆ. ಬಂಧನದಲ್ಲಿರುವ ನನ್ನನ್ನು ಬಂಧಮುಕ್ತಗೊಳಿಸಿ ಎಂದು ಪೋಪ್ ಫ್ರಾನ್ಸಿಸ್ ಮತ್ತು ಭಾರತೀಯ ಸರಕಾರದ ಸಹಾಯ ಕೋರಿ ವಿಡಿಯೋ ಒಂದನ್ನು ಯೂಟ್ಯೂಬ್ನಲ್ಲಿ ಹರಿಯಬಿಟ್ಟಿದ್ದರು.
ಕಷ್ಟದಲ್ಲಿರುವ ಯಾವುದೇ ಅನಿವಾಸಿ ಭಾರತೀಯರು ಸಹಾಯ ಕೋರಿ ಟ್ವೀಟ್ ಮಾಡಿದರೂ ಕೂಡಲೇ ಅವರ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಸುಷ್ಮಾ ಸ್ವರಾಜ್ ಅಪಾರ ಜನಮನ್ನಣೆಗೆ ಪಾತ್ರರಾಗಿದ್ದಾರೆ.