ದೇಶಪ್ರಮುಖ ಸುದ್ದಿ

ಭಾರತದ 46ನೇ ಮುಖ್ಯ ನ್ಯಾಯಾಧೀಶರಾದಿ ಪ್ರಮಾಣವಚನ ಸ್ವೀಕರಿಸಿದ ರಂಜನ್ ಗೊಗೋಯಿ

ನವದೆಹಲಿ,ಅ.3ಭಾರತದ 46ನೇ ಮುಖ್ಯ ನ್ಯಾಯಾಧೀಶರಾಗಿ ಜಸ್ಟಿಸ್ ರಂಜನ್ ಗಗೋಯಿ ಬುಧವಾರ ಪ್ರಮಾಣವಚನ ಸ್ವೀಕರಿಸಿದರು.

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಜಸ್ಟಿಸ್‌ ಗೊಗೋಯಿ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಬೋಧಿಸಿದರು.

ಅ.1 ರಂದು ನಿವೃತ್ತಿಯಾದ ಜಸ್ಟಿಸ್ ದೀಪಕ್ ಮಿಶ್ರಾ ಉತ್ತರಾಧಿಕಾರಿಯಾಗಿ ಗೊಗೋಯಿ ಅಧಿಕಾರ ಸ್ವೀಕರಿಸಿದ್ದಾರೆ. 63ರ ಹರೆಯದ ಜಸ್ಟಿಸ್ ರಂಜನ್ ಗೊಗೋಯಿ ಭಾರತದ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡಿರುವ ಈಶಾನ್ಯ ರಾಜ್ಯದ ಮೊದಲ ವ್ಯಕ್ತಿಯಾಗಿದ್ದಾರೆ.

ಅಯೋಧ್ಯೆಯ ವಿವಾದಾತ್ಮಕ ರಾಮಜನ್ಮಭೂಮಿ ನಿವೇಶನದ ಹಕ್ಕು ಮತ್ತು ಅಸ್ಸಾಂನಲ್ಲಿನ ಎನ್‌ಆರ್‌ಸಿ ಸೇರಿದಂತೆ ಹಲವು ಅತ್ಯಂತ ಪ್ರಮುಖ ಪ್ರಕರಣಗಳು ಜಸ್ಟಿಸ್‌ ಗೊಗೋಯಿ ಅವರ ಮುಂದೆ ಇತ್ಯರ್ಥಕ್ಕೆ ಬರಲಿವೆ.

ಗೊಗೋಯಿ 1954ರ ನವೆಂಬರ್‌ 18ರಂದು ಜನಿಸಿದರು. ಗೊಗೋಯಿ ಅವರ ತಂದೆ ಕೇಶಬ್‌ ಚಂದ್ರ ಗೊಗೋಯಿ ಅವರು 1982ರಲ್ಲಿ ಅಸ್ಸಾಂ ಮುಖ್ಯಮಂತ್ರಿಯಾಗಿದ್ದರು ಮತ್ತು ಕಾಂಗ್ರೆಸ್‌ನ ರಾಜಕಾರಣಿಯಾಗಿ ಪ್ರಖ್ಯಾತರಾಗಿದ್ದರು.

13 ತಿಂಗಳ ಕಾಲ ಸಿಜೆಐ ಆಗಿ ಕಾರ್ಯನಿರ್ವಹಿಸಲಿರುವ ಗೊಗೋಯಿ 2019ರ ನವೆಂಬರ್ 17ಕ್ಕೆ ನಿವೃತ್ತಿಯಾಗಲಿದ್ದಾರೆ. (ಎಂ.ಎನ್)

Leave a Reply

comments

Related Articles

error: