ಮೈಸೂರು

ಎಲ್ಲ ಮಾಧ್ಯಮಗಳಿಗಿಂತಲೂ ಅಕ್ಷರ ಮಾಧ್ಯಮ ಸರ್ವಶ್ರೇಷ್ಠ : ಡಾ.ರಾಮೇಗೌಡ

ಮೈಸೂರು,ಅ.3:- ಎಲ್ಲ ಮಾಧ್ಯಮಗಳಿಗಿಂತಲೂ ಅಕ್ಷರ ಮಾಧ್ಯಮ ಸರ್ವಶ್ರೇಷ್ಠವಾಗಿದ್ದು, ಅಕ್ಷರ ಮಾಧ್ಯಮ ಎಲ್ಲಿಯವರೆಗೆ ಇರಲಿದೆಯೋ ಅಲ್ಲಿಯವರೆಗೆ ಸಾಹಿತ್ಯ ಚೆನ್ನಾಗಿಯೇ ಇರಲಿದೆ ಎಂದು ಪ್ರಸಿದ್ಧ ಸಾಹಿತಿ ಡಾ.ರಾಮೇಗೌಡ ತಿಳಿಸಿದರು.

ವಿಜಯನಗರದಲ್ಲಿರುವ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿಂದು ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಮತ್ತು ಕಾಲೇಜು ಶಿಕ್ಷಣ ಇಲಾಖೆ ಕನ್ನಡ ಕ್ರಿಯಾ ವೇದಿಕೆಯ ವತಿಯಿಂದ ಕಾಲೇಜಿನ ಒಳಾವರಣದಲ್ಲಿ ಜಾಣ ಜಾಣೆಯರ ಬಳಗ 2018-19 ಸಾಹಿತ್ಯ ರಚನೆ ಮತ್ತು ಸಂವಾದಲ್ಲಿ ಪಾಲ್ಗೊಂಡು ಮಾತನಾಡಿದರು. ಯಾವುದೇ ವಿದ್ಯುನ್ಮಾನ ಮಾಧ್ಯಮವಿದ್ದರೂ ಅಕ್ಷರ ಮಾಧ್ಯಮ ಸರ್ವಶ್ರೇಷ್ಠವಾದದ್ದು. ಎಲ್ಲಿಯವರೆಗೆ ಅಕ್ಷರಮಾಧ್ಯಮವಿರತ್ತೋ,ನಮ್ಮ ಸಾಹಿತ್ಯ ಪ್ರಕಟಗೊಳ್ಳತ್ತೋ ಅದನ್ನು ಎಲ್ಲರೂ ಓದುತ್ತಾರೋ ಅಲ್ಲಿಯವರೆಗೆ ಸಾಹಿತ್ಯ ಚೆನ್ನಾಗಿಯೇ ಇರಲಿದೆ ಎಂದರು. ಅಕ್ಷರ ಮಾಧ್ಯಮದಿಂದಲೇ ಸಾಹಿತ್ಯವನ್ನು ಓದಲು ಸಾಧ್ಯ. ಅಂತರ್ಜಾಲದಲ್ಲಿ ಸಿಗುವ ಸಾಹಿತ್ಯ ಅನಂದವನ್ನು ನೀಡಲಾರದು. ಏನೇ ಮಾಧ್ಯಮ ಬಂದರೂ ಕೂಡ ಅಕ್ಷರ ಮಾಧ್ಯಮ ಉಳಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಅಕ್ಷರ ಮಾಧ್ಯಮದಲ್ಲಿ ಪ್ರಕಟವಾಗುವ ಸಾಹಿತ್ಯ ಸತ್ವವನ್ನು ಉಳಿಸಿಕೊಳ್ಳಲಿದೆ. ಪುಸ್ತಕ ರೂಪದಲ್ಲಿ ಪ್ರಕಟಗೊಂಡಿರುವುದನ್ನು ಓದಿದರೆ ಸಂತೋಷದ ಅನುಭವವಾಗಲಿದೆ. ಸಾಹಿತ್ಯ ಆದಿವಾಸಿಗಳ ಕಾಲದಿಂದಲೂ ಬಂದಿದೆ. ಪ್ರಾಚೀನ ಕಾಲದಲ್ಲಿ ಅಭಿವ್ಯಕ್ತಿ ಮಾಧ್ಯಮ ಭಿನ್ನವಿತ್ತು. ಮಾತೇ ಇಲ್ಲದಾಗ ಕೂಡ ಸಾಹಿತ್ಯವಿತ್ತು. ಚಿತ್ರದ ಮೂಲಕ ತಿಳಿಸಲಾಗುತ್ತಿತ್ತು. ಮಾತು ಬಂದಾಗ ಪದಗಳು ಕೂಡಲೇ ಬಂದಿಲ್ಲ. ಉದ್ಘಾರ ಬಂತು.ಭಾಷೆ ಕೂಡ ಸಂಕೇತದ ಮೂಲಕವೇ ಬಂತು. ಸಾಹಿತ್ಯ ಎಲ್ಲರಿಗೂ ಅನಿವಾರ್ಯವಲ್ಲ. ಆಶಯಗಳು ಸೃಜನಶೀಲತೆಯನ್ನು ಸೃಷ್ಟಿಮಾಡಿದಾಗ ಕಾವ್ಯವಾಗಲಿದೆ. ಆಶಯಗಳೇ ಇಲ್ಲದಿರುವುದು ಕಾವ್ಯವಾಗಲ್ಲ. ಆಶಯಗಳನ್ನು ಹುಟ್ಟುಹಾಕಿದರೆ ಮಾತ್ರ ಸೃಜನಶೀಲತೆ ಜೀವಂತವಾಗಿರಲಿದೆ ಎಂದರು.

ಕಾರ್ಯಕ್ರಮದಲ್ಲಿ ಸ.ಮ.ಪ್ರ.ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸತೀಶ್ ಬಾಬು ಬಿ.ಕೆ, ಕನ್ನಡ ಸ್ನಾತಕೋತ್ತರ ವಿಭಾಗ ಮತ್ತು ಜಾಣ ಜಾಣೆಯರ ಬಳಗದ ಸಂಯೋಜಕ ಡಾ.ಬೆಟ್ಟೇಗೌಡ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: