ಕರ್ನಾಟಕ

ರಿಯಲ್ ಎಸ್ಟೇಟ್ ಡೆವಲಪರ್ಸ್, ಮಾಲ್‍ಗಳ ಮೇಲೆ ದಾಳಿ: 169 ಕೋಟಿ ರೂ. ಅಕ್ರಮ ಸಂಪತ್ತು ಜಪ್ತಿ

ಬೆಂಗಳೂರು: ಡಿ.23ರಿಂದ 26ರವರೆಗೆ ನಗರದ ರಿಯಲ್ ಎಸ್ಟೇಟ್ ಡೆವಲಪರ್ಸ್ ಹಾಗೂ ಮಾಲ್‍ಗಳ ಮಾಲೀಕರ ಕಚೇರಿ ಮತ್ತು ಮನೆಗಳ ಮೇಲೆ ದಾಳಿ ನಡೆಸಿ ಸುಮಾರು 169 ಕೋಟಿ ರೂ. ಅಕ್ರಮ ಸಂಪತ್ತನ್ನು ಜಪ್ತಿ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಣೆ ತಿಳಿಸಿದೆ. ರಿಯಲ್ ಎಸ್ಟೇಟ್ ಕಂಪನಿಗಳ ಹೆಸರನ್ನು ಬಹಿರಂಗಪಡಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ಎರಡು ರಿಯಲ್ ಎಸ್ಟೇಟ್ ಡೆವಲಪರ್‍ಗಳು ಆದಾಯ ತೆರಿಗೆ ಬಲೆಯಿಂದ ತಪ್ಪಿಸಿಕೊಳ್ಳಲು ವಸತಿ ಸೌಕರ್ಯ ಕಲ್ಪಿಸಿದ ನಕಲಿ ರಸೀದಿಗಳನ್ನು ಸೃಷ್ಠಿಸುವ ಕಾರ್ಯದಲ್ಲಿ ತೊಡಗಿದ್ದರು. ಈ ಪ್ರಕರಣದಲ್ಲಿ 143 ಕೋಟಿ ರೂ. ಅಕ್ರಮ ನಡೆಸಿರುವುದು ಪತ್ತೆಯಾಗಿದೆ. ಮಾಲ್‍ಗಳ ಮಾಲೀಕರು 26 ಕೋಟಿ ರೂ. ಆದಾಯ ಗೋಷಿಸಿಕೊಳ್ಳದೇ ಇರುವುದನ್ನು ಪತ್ತೆ ಮಾಡಲಾಗಿದೆ. ಸರಕುಗಳನ್ನು ನಗದು ಮೂಲಕ ಮಾರಿದ್ದನ್ನು ಮತ್ತು ಸ್ವೀಕರಿಸಿದ್ದನ್ನು ದಾಖಲೆಯಲ್ಲಿ ತೋರಿಸಿಲ್ಲ. ಅಪಾರ ಮೊತ್ತವನ್ನು ಚಿನ್ನ ಮತ್ತು ಆಭರಣಗಳ ಮೇಲೆ ಹೂಡಿಕೆ ಮಾಡಿರುವುದು ಪತ್ತೆ ಆಗಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

comments

Related Articles

error: