ಮೈಸೂರು

‘ಮಾಧ್ಯಮ ಮತ್ತು ಆರಕ್ಷಕ ವ್ಯವಸ್ಥೆ’ : ಉಪನ್ಯಾಸ ನಾಳೆ

ಮೈಸೂರು,ಅ.3 : ಮೈಸೂರು ವಿವಿಯ ಸಂವಹನ ಮತ್ತು ಪತ್ರಿಕೋದ್ಯಮ ಅಧ್ಯಯನ ವಿಭಾಗದಿಂದ ‘ಮಾಧ್ಯಮ ಮತ್ತು ಆರಕ್ಷಕ ವ್ಯವಸ್ಥೆ’ ವಿಷಯವಾಗಿ ವಿಚಾರಗೋಷ್ಠಿಯನ್ನು ನಾಳೆ (4)ರ ಮಧ್ಯಾಹ್ನ 3 ಗಂಟೆಗೆ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಮೈಸೂರು ನಗರದ ಪೊಲೀಸ್ ಕಮಿಷನರ್ ಡಾ.ಸುಬ್ರಹ್ಮಣೇಶ್ವರ ರಾವ್ ಅವರು ಉಪನ್ಯಾಸ ನೀಡಲಿದ್ದು, ಸ್ನಾತಕೋತ್ತರ, ಸ್ನಾತಕೇತರ ಮಾಧ್ಯಮ ಅಧ್ಯಾಪಕರು, ಸಂಶೋಧಕರು ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ನಂತರ ಸಂವಾದ ನಡೆಯಲಿದೆ.

ಮುಖ್ಯ ಅತಿಥಿಯಾಗಿ ಕುಲಸಚಿವ ಪ್ರೊ.ಜೆ.ಸೋಮಶೇಖರ್ ಭಾಗಿಯಾಗಲಿದ್ದಾರೆ,  ಇದೇ ಸಂದರ್ಭದಲ್ಲಿ ಅರ್ಥಪೂರ್ಣ ಸುದ್ದಿ ಚಿತ್ರಗಳು, ಜಾಹೀರಾತುಗಳನ್ನು ಪ್ರದರ್ಶಿಸಲಾಗುವುದು ಎಂದು ವಿಭಾಗದ ಮುಖ್ಯಸ್ಥರಾದ ಪ್ರೊ.ಬಿ.ಪಿ.ಮಹೇಶ್ ಚಂದ್ರ ಗುರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: