ಮೈಸೂರು

ಮೈಸೂರಿನಿಂದ ಬೆಂಗಳೂರಿಗೆ ಮಲ್ಟಿ ಆಕ್ಸೆಲ್ ಸ್ಕ್ಯಾನಿಯಾ ಬಸ್

ಕೆ.ಎಸ್.ಆರ್.ಟಿ.ಸಿ ಮೈಸೂರು ಗ್ರಾಮಾಂತರ ವಿಭಾಗದ ವತಿಯಿಂದ ವೋಲ್ವೋ ವಾಹನಗಳ ಬದಲು ಬೆಂಗಳೂರಿಗೆ ಮಲ್ಟಿ ಆಕ್ಸೆಲ್ ಸ್ಕ್ಯಾನಿಯಾ ವಾಹನಗಳು ಸಂಚರಿಸಲಿದೆ.

ಮಂಗಳವಾರ ಬೆಳಿಗ್ಗೆ ಮೈಸೂರು ಸಬ್ ಅರ್ಬನ್ ನಿಲ್ದಾಣದಿಂದ ಮೈಸೂರು ಗ್ರಾಮಾಂತರ ವಿಭಾಗದ ನಿಯಂತ್ರಣಾಧಿಕಾರಿ ಎಂ.ಮಹೇಶ್ ಸಂಚಾರಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಮೊದಲು ಬೆಂಗಳೂರಿನಿಂದ ಚೆನ್ನೈ ಮತ್ತು ಬೆಂಗಳೂರಿನಿಂದ ಬಳ್ಳಾರಿಗೆ ಈ ಬಸ್ ಗಳ ಸೇವೆಯಿತ್ತು. ಇದೀಗೆ ಮೈಸೂರಿನಿಂದ ಬೆಂಗಳೂರಿಗೆ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಮೈಸೂರಿನಿಂದ ಹೊರಟ ಬಸ್ ಗೆ ಮಧ್ಯದಲ್ಲಿ ಎಲ್ಲಿಯೂ ನಿಲುಗಡೆ ಇರುವುದಿಲ್ಲ. ಎರಡು ಗಂಟೆ 40 ನಿಮಿಷದಲ್ಲಿ ಬೆಂಗಳೂರನ್ನು ತಲುಪಲಿದೆ ಎಂದರು.

ಒಬ್ಬರಿಗೆ 310 ರೂ. ದರ ನಿಗದಿ ಪಡಿಸಲಾಗಿದ್ದು, ಸುಖಾಸೀನ ಸೀಟುಗಳನ್ನು ಹೊಂದಿದೆ. ಯಾವುದೇ ರೀತಿಯಿಂದಲೂ ಪ್ರಯಾಣಿಕರಿಗೆ ತೊಂದರೆಯಾಗುವುದಿಲ್ಲ. ಖಾಸಗಿ ವಾಹನಗಳಲ್ಲಿ ಪ್ರಯಾಣ ಮಾಡುವವವರು ಈ ಬಸ್ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಕೆ.ಎಸ್.ಆರ್.ಟಿ.ಸಿ. ಮೈಸೂರು ವಿಭಾಗದ ಅಧಿಕಾರಿಗಳಾದ ಶ್ರೀನಿವಾಸ, ಮಹಾಲಿಂಗೇಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: