ಮೈಸೂರು

‘ಸಿರಿಧಾನ್ಯ ಬಳಸಿ – ಔಷಧ ನಿಯಂತ್ರಿಸಿ’ ವಿಶೇಷ ಉಪನ್ಯಾಸ ಜ.2ರಂದು

ಸಿರಿ ಧಾನ್ಯಗಳ ಮಹತ್ವ ಸಾರುವ ವಿಚಾರ ಸಂಕಿರಣವನ್ನು ಜಯಲಕ್ಷ್ಮೀಪುರಂನ ‘ತಾಂತ್ವ’ ಸಿರಿಧಾನ್ಯಗಳ ಸಗಟು ಮಾರಾಟ ಮಳಿಗೆಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವ್ಯವಸ್ಥಾಪಕ ಸಂಸ್ಥಾಪಕಿ ಪದ್ಮಜಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅವರು ಮಂಗಳವಾರ ಪತ್ರಕರ್ತರ ಭವನದಲ್ಲಿ ಈ ಬಗ್ಗೆ ಮಾತನಾಡಿ, ಜ.2ರಂದು ಸಂಜೆ 5ಕ್ಕೆ ಜಗನ್ಮೋಹನ ಅರಮನೆಯಲ್ಲಿ ಖ್ಯಾತ ಹೋವಿಯೋಪತಿ ತಜ್ಞ ಡಾ.ಖಾದರ್‍ರಿಂದ ‘ಸಿರಿಧಾನ್ಯ ಬಳಸಿ – ಔಷಧ ನಿಯಂತ್ರಿಸಿ’ ವಿಷಯವಾಗಿ ವಿಶೇಷ ಉಪನ್ಯಾಸ ಹಾಗೂ ಸಂವಾದವನ್ನು ಆಯೋಜಿಸಲಾಗಿದೆ ಎಂದರು.

ವ್ಯತಿರಿಕ್ತ ಆಹಾರ ಪದ್ಧತಿ ಹಾಗೂ ಬದಲಾದ ಜೀವನಕ್ರಮದಿಂದ ಹಲವಾರು ಕಾಯಿಲೆಗಳು ಆವರಿಸಿಕೊಳ್ಳುತ್ತಿವೆ. ಅದರಲ್ಲಿಯೂ ಭಾರತವು ಮಧುಮೇಹದ ತವರಾಗಿದ್ದು 2030ರಲ್ಲಿ 80 ಮಿಲಿಯನ್‍ಗೂ ಹೆಚ್ಚು ಮಧುಮೇಹಿಗಳು ಭಾರತದಲ್ಲಿರುವರು ಎಂದು ಸಮೀಕ್ಷೆ ತಿಳಿಸಿದೆ. ಮನುಷ್ಯರಲ್ಲಿ ರೋಗ ಪ್ರತಿರೋಧಕ ಶಕ್ತಿಯು ಕುಂಠಿತವಾಗಿದೆ. ಸಿರಿಧಾನ್ಯಗಳನ್ನು ಆಹಾರ ಕ್ರಮದಲ್ಲಿ ಬಳಸುವುದರಿಂದ ಆರೋಗ್ಯವನ್ನು ಕಾಪಾಡಿಕೊಂಡು ರೋಗದಿಂದ ದೂರವಿರಬಹುದು. ಅತಿ ಕಡಿಮೆ ನೀರಿನಲ್ಲಿಯೂ ಆರೋಗ್ಯದ ಆಗರವಾದ ಸಿರಿಧಾನ್ಯಗಳನ್ನು ಬೆಳೆಯಬಹುದಾಗಿದೆ ಎಂದು ವ್ಯವಸ್ಥಾಪಕ ಡಾ.ತೇಜನಾಯಕ್ ಹೇಳಿದರು.

Leave a Reply

comments

Related Articles

error: