ಕರ್ನಾಟಕಪ್ರಮುಖ ಸುದ್ದಿ

ಲಂಚ ಪಡೆಯುವಾಗಲೇ ಎಸಿಬಿ ಬಲೆಗೆ ಬಿದ್ದ ಪ್ರಾಜೆಕ್ಟ್ ಇಂಜಿನಿಯರ್

ಮಂಗಳೂರು (ಅ.4): ಸರ್ಕಾರದಿಂದ ದೊರೆಯುವ ಬಯೋ ಗ್ಯಾಸ್ ಸಬ್ಸಿಡಿಗೆ ಏಜೆನ್ಸಿ ಮಾಲೀಕರೊಬ್ಬರಿಂದ ಲಂಚ ಪಡೆಯುತ್ತಿದ್ದ ಪ್ರಾಜೆಕ್ಟ್ ಇಂಜಿನಿಯರ್ ಒಬ್ಬರು ಎಸಿಬಿ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

ಮಂಗಳೂರು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿರುವ ಸಮಗ್ರ ಗ್ರಾಮೀಣ ಇಂಧನ ಯೋಜನೆಯ ಪ್ರಾಜೆಕ್ಟ್ ಇಂಜಿನಿಯರ್ ಆಗಿರುವ ಎನ್.ನಾಗೇಶ್ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದವರು. ಇವರು ಬಯೋ ಗ್ಯಾಸ್ ಏಜೆನ್ಸಿ ಮಾಲೀಕರಲ್ಲಿ 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.

ಬಯೋ ಗ್ಯಾಸ್ ಎಜೆನ್ಸಿ ಮಾಲೀಕರು 15 ಸಾವಿರ ರೂಪಾಯಿ ನೀಡಿದ್ದು, ಮತ್ತೆ 35 ಸಾವಿರ ರೂಪಾಯಿ ನೀಡದಿದ್ದರೆ ಸಬ್ಸಿಡಿ ಹಣ ಬಿಡುಗಡೆ ಮಾಡುವುದಿಲ್ಲ ಎಂದು ಇಂಜಿನಿಯರ್ ಪೀಡಿಸುತ್ತಿದ್ದ ಎಂದು ದೂರಲಾಗಿದೆ. ಇದರಿಂದ ನೊಂದ ಬಯೋ ಗ್ಯಾಸ್ ಏಜೆನ್ಸಿ ಮಾಲೀಕರು ಮಂಗಳೂರು ಭ್ರಷ್ಟಾಚಾರ ನಿಗ್ರಹ ದಳ ಕಚೇರಿಯಲ್ಲಿ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ಬುಧವಾರ ಪ್ರಾಜೆಕ್ಟ್ ಇಂಜಿನಿಯರ್ ಎನ್.ನಾಗೇಶ್ ಅವರು 30ಸಾವಿರ ರೂಪಾಯಿ ಹಣ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: