ಪ್ರಮುಖ ಸುದ್ದಿಮೈಸೂರು

ಲೋಕಸಭಾ ಚುನಾವಣೆ ಅಭ್ಯರ್ಥಿಗಳ ‘ತಲಾಶ್’ ನಲ್ಲಿರುವ ಎಂಇಪಿ : ಷರೀಪ್

ಮೈಸೂರು,ಅ.4 : ಆಲ್ ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಕ್ಷವು (ಎಂಇಪಿ) ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲಿದ್ದು ಉತ್ತಮ ಅಭ್ಯರ್ಥಿಗಳ ತಲಾಶ್ ನಡೆಸಲಾಗುತ್ತಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಷರೀಪ್ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಂಧ್ರದ ಮೂಲದ ಡಾ.ನೌಹೀರಾ ಶೇಕ್ ಎಂಬ ಮಹಿಳೆಯಿಂದ ಸ್ಥಾಪಿತವಾದ ಈ ಪಕ್ಷವೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿತ್ತು, ಅಲ್ಲದೇ ಆಂದ್ರ ಪ್ರದೇಶದಲ್ಲಿ ಮನೆ ಮಾತಾಗಿದ್ದು ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿದ್ದು, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವುದರೊಂದಿಗೆ ಪಕ್ಷವೂ ತನ್ನದೇ ಗುರಿ, ಧ್ಯೇಯವನ್ನು ಹೊಂದಿದೆ ಎಂದು ಹೇಳಿದರು.

ಉತ್ತಮ ಆಡಳಿತ ನೀಡುವುದರೊಂದಿಗೆ ಮಹಿಳೆಯರಿಗೆ ಶೇ.50ರಷ್ಟು ಮೀಸಲು, ಪ್ರತ್ಯೇಕ ಆಸ್ಪತ್ರೆ, ದೌರ್ಜನ್ಯ ತಡೆ ಕಾಯ್ದೆಗೆ ಸೂಕ್ತ ಕಾನೂನು, ಕೃಷಿಕರಿಗೆ ಕೃಷಿ ಸಾಲ ಮನ್ನಾ, ಎಲ್.ಪಿ.ಜಿ ಕುಟುಂಬಗಳಿಗೆ ಉಚಿತ ಎಲ್ ಪಿ ಜಿ, ಗುಣಮಟ್ಟದ ಶಾಲಾ ಕಾಲೇಜು ಸ್ಥಾಪನೆ, ಪ್ರತಿ ವರ್ಷ 10 ಲಕ್ಷ ಉದ್ಯೋಗ ಸೃಷ್ಟಿ, ಜಿಲ್ಲಾ ಸರ್ಕಾರಿ ಆಸ್ಪತ್ರೆಗಳ್ಲಲಿ ಹೃದಯ ಚಿಕಿತ್ಸಾ ಸೌಲಭ್ಯ ವಿಸ್ತರಣೆ ಸೇರಿದಂತೆ ಹಲವು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಪಕ್ಷವೂ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸೈಯದ್ ಗಫರ್, ಶ್ರೀನಿವಾಸ್, ಶಾಂತಮ್ಮ ರಾಜ್, ನಾಜಿಯಾ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: