ಸುದ್ದಿ ಸಂಕ್ಷಿಪ್ತ
ವಿವಿಧ ವೃತ್ತಿ ತರಬೇತಿ : ನೇರ ಸಂದರ್ಶನ
ಮೈಸೂರು,ಅ.4-ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಗರ ಸಾರಿಗೆ ವಿಭಾಗದಲ್ಲಿ ಐ.ಟಿ.ಐ. ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಿಗೆ ತಾಂತ್ರಿಕ/ಪಾಸಾ ಶಿಶಿಕ್ಷುಗಳ ವಿವಿಧ ವೃತ್ತಿಗಳಿಗೆ ತರಬೇತಿಗಾಗಿ ಸಂದರ್ಶನವನ್ನು ಅ.10 ರಂದು ಬೆಳಿಗ್ಗೆ 10.30ಕ್ಕೆ ವಿಭಾಗೀಯ ಕಚೇರಿ ಮೈಸೂರು ನಗರ ಸಾರಿಗೆ ವಿಭಾಗ, ನೆಲ್ಸನ್ ಮಂಡೇಲಾ ರಸ್ತೆ ಬನ್ನಿಮಂಟಪ ಮೈಸೂರು ಇಲ್ಲಿ ನಡೆಯಲಿದೆ.
ಆಸಕ್ತಿಯುಳ್ಳವರು ಹೆಚ್ಚಿನ ಮಾಹಿತಿ ಮತ್ತು ಅರ್ಜಿ ನಮೂನೆಗಳನ್ನು ಅ.6 ರೊಳಗೆ ವಿಭಾಗೀಯ ನಿಯಂತ್ರಣಾಧಿಕಾರಿ, ಮೈಸೂರು ನಗರ ಸಾರಿಗೆ ಇಲಾಖೆ, ಮೈಸೂರು ಇವರನ್ನು ಸಂಪರ್ಕಿಸಬಹುದು. (ಎಂ.ಎನ್)