ಸುದ್ದಿ ಸಂಕ್ಷಿಪ್ತ

ರೆಡ್ ಕ್ರಾಸ್ ಘಟಕದ ದೈನಂದಿನ ಚಟುವಟಿಕೆಗಳ ಉದ್ಘಾಟನೆ ನಾಳೆ

ಮೈಸೂರು,ಅ.4 : ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ರೆಡ್ ಕ್ರಾಸ್ ಯುವ ಘಟಕದ ದೈನಂದಿನ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮವನ್ನು ನಾಳೆ (5)ರ ಮಧ್ಯಾಹ್ನ 12 ಗಂಟೆಗೆ ನಟರಾಜ ಸಭಾ ಭವನದಲ್ಲಿ ಏರ್ಪಡಿಸಲಾಗಿದೆ.

ಶ್ರೀಚಿದಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಮೈಸೂರು ಜಿಲ್ಲಾ ಶಾಖೆಯ ಸಭಾಪತಿ ಕೆ.ಬಿ.ಗುರುಮೂರ್ತಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಉಪಸಭಾಪತಿ ಪ್ರೊ.ಎಂ.ಮಹದೇವಪ್ಪ ಇರಲಿದ್ದಾರೆ. ಪ್ರಾಂಶುಪಾಲೆ ಡಾ.ಎಂ.ಶಾರದ ಅಧ‍್ಯಕ್ಷತೆ ವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

Check Also

Close
error: