ಕರ್ನಾಟಕಮೈಸೂರು

ಕಾವೇರಿ ವಿವಾದ: ಪ್ರಧಾನಿ ಬಳಿಗೆ ತಜ್ಞರ ನಿಯೋಗ ಒಯ್ಯಲು ಕಾನೂನು ತಜ್ಞರೊಂದಿಗೆ ಸಿಎಂ ಸಮಾಲೋಚನೆ

ಬೆಂಗಳೂರು/ಮೈಸೂರು: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಕಾನೂನು ತಜ್ಞರ ಸಭೆ ಕರೆದಿದ್ದಾರೆ. ಕಾನೂನು ಸಚಿವ ಟಿ.ಬಿ. ಜಯಚಂದ್ರ, ನೀರಾವರಿ ಸಚಿವ ಎಂ.ಬಿ. ಪಾಟೀಲ, ಹಾಲಿ ಮತ್ತು ಮಾಜಿ ನ್ಯಾಯಾಧೀಶರನ್ನೊಳಗೊಂಡಂತೆ ನ್ಯಾಯಾಧೀಶರಾದ ರಾಜೇಂದ್ರ ಬಾಬು, ರಾಮಾ ಜೋಯಿಸ್ ಮತ್ತು ರಮೇಶ್ ಹರದನಹಳ್ಳಿ ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಕಾನೂನು ತಜ್ಞರು ಪ್ರಧಾನಿ ನರೇಂದ್ರ ಮೋದಿಯವರು ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ರಾಜಕೀಯ ಪಕ್ಷಗಳನ್ನು ಕರೆದು ಶೀಘ್ರದಲ್ಲೆ ಸಮಿತಿ ರಚಿಸಿ ಪ್ರಧಾನ ಮಂತ್ರಿಯ ಬಳಿ ಕೊಂಡೊಯ್ಯಬೇಕು ಎಂದು ತಿಳಿಸಿದರು.

ಕಾವೇರಿ ನೀರು ವಿವಾದ ಕುರಿತಂತೆ ಮೈಸೂರು ಕನ್ನಡವೇದಿಕೆಯ ಸದಸ್ಯರು, ಡಾ. ರಾಜ್ ಕುಮಾರ್ ಕನ್ನಡ ಸೇನೆಯ ಸದಸ್ಯರು ಗುರುವಾರ ಬೆಳಿಗ್ಗೆ ರೈಲು ರೋಕೋ ನಡೆಸಿ ಕೆಂದ್ರ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು. ಕನ್ನಡಪರ ಸಂಘಟನೆಗಳು ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದವು. ಆದರೆ ಮೈಸೂರು ಸೆಂಟ್ರಲ್‍ನಲ್ಲಿ ಅದಾಗಲೇ 300 ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಅನ್ನು ನಿಯೋಜಿಸಲಾಗಿತ್ತು. ರೈಲ್ವೆ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿ ನಿಲ್ದಾಣದೊಳಗೆ ಪ್ರವೇಶಿಸಲು ಯತ್ನಿಸಿದ ಸೇನೆಯ 7 ಮಂದಿ ಸದಸ್ಯರನ್ನು ಬಂಧಿಸಿದರು. ಪ್ರಯಾಣಿಕರ ಸುರಕ್ಷತೆಗಾಗಿ ಮೊದಲೇ ಭದ್ರತೆ ಒದಗಿಸಲಾಗಿತ್ತು. ಹೀಗಾಗಿ ರೈಲ್ ರೋಕೊ ವಿಫಲವಾಗಿದೆ. ವಿವಿಧ ಕನ್ನಡಪರ ಸಂಘಟನೆಗಳು ರಾಜ್ಯಾದ್ಯಂತ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ರೈಲ್ ರೋಕೋ ಪ್ರತಿಭಟನೆಗೆ ಕರೆ ನೀಡಿತ್ತು.

Leave a Reply

comments

Related Articles

error: