ದೇಶಪ್ರಮುಖ ಸುದ್ದಿ

ಈ ಬ್ಯಾಂಕಿನ 51 ಶಾಖೆಗಳು ಬಂದ್ ಆಗುತ್ತಿವೆ!

ಬೆಂಗಳೂರು (ಅ.5): ಬ್ಯಾಂಕ್ ಆಫ್ ಮಹಾರಾಷ್ಟ್ರ (ಬಿಒಎಂ) ದೇಶಾದ್ಯಂತ ತನ್ನ 51 ಶಾಖೆಗಳನ್ನು ಮುಚ್ಚುವುದಾಗಿ ಘೋಷಿಸಿದೆ ಎಂದು ಬ್ಯಾಂಕಿನ ಅಧಿಕೃತ ಮೂಲ ತಿಳಿಸಿದೆ. ನಗರ ಕೇಂದ್ರಗಳಲ್ಲಿರುವ ಸಾರ್ವಜನಿಕ ವಲಯ ಬ್ಯಾಂಕ್ (ಪಿಎಸ್ಬಿ) ಶಾಖೆಗಳು ಕಾರ್ಯನಿರತವಾಗಿಲ್ಲವೆಂದು ಘೋಷಿಸಲ್ಪಟ್ಟಿದ್ದು, ದೊಡ್ಡ ಪ್ರಮಾಣದ ನಷ್ಟವನ್ನು ಎದುರಿಸುತ್ತಿರುವುದರಿಂದ ಅವುಗಳನ್ನು ಗುರುತಿಸಲಾಗಿದೆ ಎಂದು ಪುಣೆ ಪ್ರಧಾನ ಕಚೇರಿಯ ಬ್ಯಾಂಕ್ ಅಧಿಕಾರಿ ತಿಳಿಸಿದ್ದಾರೆ.

ಬ್ಯಾಂಕ್ ಆಫ್ ಮಹಾರಾಷ್ಟ್ರ ದೇಶದಾದ್ಯಂತ ಹೊಂದಿರುವ 1900 ಶಾಖೆಗಳ ಪೈಕಿ 51 ಶಾಖೆಗಳು ನಷ್ಟ ಅನುಭವಿಸುತ್ತಿವೆ. ಈ ಶಾಖೆಗಳನ್ನು ಬಂದ್ ಮಾಡುವ ಮೂಲಕ ವೆಚ್ಚ ಕಡಿಮೆ ಮಾಡಬಹುದೆಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ. ಬಂದ್ ಮಾಡಲಾದ ಶಾಖೆಗಳಲ್ಲಿ ಗ್ರಾಹಕರು ಹೊಂದಿದ್ದ ಖಾತೆಗಳನ್ನು ಹತ್ತಿರದ ಮತ್ತೊಂದು ಶಾಖೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಲಾಗಿದೆ.

ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಗಳ ಐ.ಎಫ್.ಎಸ್.ಸಿ ಹಾಗೂ ಎಂಐಸಿಆರ್ ಕೋಡ್ ಗಳು ರದ್ದಾಗಿರುವುದರಿಂದ ತಮ್ಮ ಹಳೆ ಚೆಕ್ ಪುಸ್ತಕಗಳನ್ನು ಮರಳಿಸಿ ಹೊಸ ಚೆಕ್ ಪುಸ್ತಕ ಪಡೆಯಲು ಸೂಚಿಸಲಾಗಿದೆ. (ಎನ್.ಬಿ)

Leave a Reply

comments

Related Articles

error: