
ದೇಶ
ಡಿ.30ರ ಬಳಿಕವೂ ನಗದು ಹಿಂಪಡೆತ ಯಥಾಸ್ಥಿತಿ ಮುಂದುವರಿಕೆ
ಕೇಂದ್ರ ಸರ್ಕಾರ ನೋಟು ಅಮಾನ್ಯಗೊಳಿಸಿದ ದಿನದಿಂದಲೂ ಬ್ಯಾಂಕ್ ಗ್ರಾಹಕರು ನಗದು ಹಿಂಪಡೆಯಲು ಕೇಂದ್ರ ಸರ್ಕಾರ ಹಾಗೂ ಆರ್.ಬಿ.ಐ ವಿಧಿಸಿದ್ದ ಷರತ್ತುಗಳನ್ನು ಡಿ.30ರ ನಂತರವೂ ಯಥಾಸ್ಥಿತಿ ಮುಂದುವರೆಯುವ ಎಲ್ಲಾ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.
ವಾರಕ್ಕೆ 25 ಸಾವಿರ ಹಾಗೂ ಎಟಿಎಂ ಮೂಲಕ ದಿನಕ್ಕೆ 2500 ಹಿಂಪಡೆತ ಡಿಸೆಂಬರ್ ಬಳಿಕವೂ ಮುಂದುವರೆಯಲಿದೆ. ನಗದು ಹಿಂಪಡೆಯಲು ಸರ್ಕಾರದಿಂದ ಯಾವುದೇ ಸೂಚನೆ ನೀಡದ ಹಿನ್ನೆಲೆಯಲ್ಲಿ ಮಿತಿಯನ್ನು ಡಿ.30ರ ನಂತರವೂ ಇದೇ ರೀತಿ ಮುಂದುವರೆಯಲಿದೆ.
ನೋಟು ಮುದ್ರಣ ಕೇಂದ್ರ ಹಾಗೂ ಆರ್.ಬಿ.ಐ ದೇಶದಲ್ಲಿನ ಬ್ಯಾಂಕ್ಗಳಿಗೆ ಅಗತ್ಯ ಪ್ರಮಾಣದ ನೋಟು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎಸ್.ಬಿ.ಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ನಗದು ಹಿಂಪಡೆತ ಮಿತಿಯನ್ನು ಯಥಾಸ್ಥಿತಿಯಲ್ಲಿಯೇ ಮುಂದುವರೆಸಲಾಗುವುದು ಎಂದು ಬ್ಯಾಂಕ್ಗಳಿಗೆ ತಿಳಿಸಿದ್ದಾರೆ. ಇದಕ್ಕೆ ಬ್ಯಾಂಕ್ ಯೂನಿಯನ್ ಕೂಡಾ ಸಮ್ಮತಿಸಿವೆ ಎನ್ನಲಾಗಿದೆ.
ಬ್ಯಾಂಕ್ಗಳಲ್ಲಿ ನಗದು ಕೊರತೆಯಿಂದಾಗಿ ಗ್ರಾಹಕರೊಂದಿಗೆ ಸಂಘರ್ಷಿಸುವ ಪರಿಸ್ಥಿತಿ ಬ್ಯಾಂಕ್ ಸಿಬ್ಬಂದಿಗಳಿಗೆ ನಿರ್ಮಾಣವಾಗಿದೆ.