ಮನರಂಜನೆ

ಡೆಂಗ್ಯೂದಿಂದ ಬಳಲುತ್ತಿದ್ದಾರಂತೆ ನಟಿ ಶ್ರದ್ಧಾ ಕಪೂರ್

ದೇಶ(ನವದೆಹಲಿ)ಅ.5:- ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಬ್ಯಾಡ್ ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬಯೋಪಿಕ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಆದರೆ ಇದೇ ವೇಳೆ ಅವರನ್ನು ಡೆಂಗ್ಯೂ ಕಾಡುತ್ತಿದೆ.

ಶ್ರದ್ಧಾ ಕಪೂರ್ ಗೆ ಡೆಂಗ್ಯೂ ಕಾಣಿಸಿಕೊಂಡ ಕಾರಣ ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಶ್ರದ್ಧಾ ಕಪೂರ್ ಆರೋಗ್ಯ ಸರಿಯಾಗಿರಲಿಲ್ಲ. ಆರೋಗ್ಯ ಸರಿಯಿಲ್ಲದ ಕಾರಣ ಚೆಕ್ ಅಪ್ ಗೆಂದು ಆಸ್ಪತ್ರೆಗೆ ತೆರಳಿದಾಗ ಡೆಂಗ್ಯೂ ಇರುವುದು ತಿಳಿದು ಬಂದಿದೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ  ಡೆಂಗ್ಯೂ ಆಗಿರುವ ಕುರಿತು ಹೇಳಿಕೊಂಡಿದ್ದು ನಾನು ಆರೋಗ್ಯವಾಗುತ್ತಿದ್ದೇನೆ. ಆರೋಗ್ಯ ಸುಧಾರಿಸುತ್ತಿದೆ ಎಂದಿದ್ದಾರೆ.

ವೈದ್ಯರು ವಿಶ್ರಾಂತಿ ಪಡೆಯಲು ತಿಳಿಸಿದ್ದು, ಇದರಿಂದ ಶ್ರದ್ಧಾ ನಟನೆಯ ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಅವರ ಆರೋಗ್ಯ ಸುಧಾರಿಸುತ್ತಲೇ ಚಿತ್ರೀಕರಣ ಆರಂಭವಾಗಲಿದೆ ಎಂದು ತಿಳಿದುಬಂದಿದೆ. (ಎಸ್.ಎಚ್)

Leave a Reply

comments

Related Articles

error: