ಪ್ರಮುಖ ಸುದ್ದಿ

ವೈಯ್ಯಾಲಿ ಕಾವಲ್‌ನ ಸುತ್ತಮುತ್ತ ಭಯದ ವಾತಾವರಣ ಸೃಷ್ಟಿಸುತ್ತಿದ್ದ ಮೂವರ ಬಂಧನ

ರಾಜ್ಯ(ಬೆಂಗಳೂರು)ಅ.5:- ಮಲ್ಲೇಶ್ವರಂನ ಬಿಜೆಪಿ ಕಚೇರಿ ಹಾಗೂ ವೈಯ್ಯಾಲಿ ಕಾವಲ್‌ನ ಸುತ್ತಮುತ್ತ ಭಯದ ವಾತಾವರಣ ಸೃಷ್ಟಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಹರೀಶ್ ಮಾರಕಾಸ್ತ್ರ ಹಿಡಿದು ಆವಾಜ್ ಹಾಕುತ್ತಿರುವುದನ್ನು ಕಂಡು ಆಕ್ರೋಶಗೊಂಡು ಪುಡಿ ರೌಡಿಗಳಾದ ಮಂಜುನಾಥ್, ಅಕ್ಷಯ್, ಚಿನ್ನಿ ಮತ್ತು ಗ್ಯಾಂಗ್ ಲಾಂಗು ಹಿಡಿದುಕೊಂಡು ಹರೀಶ್‌ನ ಅಪ್ಪಳ ಮನೆ ಮುಂದೆ ದಾಳಿ ನಡೆಸಿದ್ದಾರೆ. ರೌಡಿ ಹರೀಶ್ ಮನೆಯ ಮುಂದೆ ಹೀಗೆ ಮಾಡಿದರೆ ಹೆಸರು ಗಿಟ್ಟಿಸಿಕೊಳ್ಳಬಹುದು ಎನ್ನುವ ಹುಚ್ಚುತನದಿಂದ ಹೀಗೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದಾಳಿಯ ವೇಳೆ ಪುಡಿ ರೌಡಿಗಳು ಅಂಗಡಿ ಮಾಲೀಕರ ಮೇಲೆ ಮಚ್ಚು ಬೀಸಲು ಯತ್ನಿಸಿ ವಿಫಲರಾಗಿದ್ದಾರೆ. ಈ ಸಂಬಂಧ ಅಂಗಡಿ ಮಾಲೀಕ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಂಜುನಾಥ್, ಚಿನ್ನಿ, ಅಕ್ಷಯ್‌ನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: