ಸುದ್ದಿ ಸಂಕ್ಷಿಪ್ತ

ಅ.7ರಂದು ಶರಣ ಸಂಗಮ : ಅಭಿನಂದನಾ ಸಮಾರಂಭ

ಮೈಸೂರು,ಅ.5 : ಹೆಬ್ಬಾಳು-ವಿಜಯನಗರ ಬಸವ ಸಮಿತಿ ವತಿಯಿಂದ ‘ಶರಣ ಸಂಗಮ’ 288 ಹಾಗೂ ಅಭಿನಂದನಾ ಸಮಾರಂಭವನ್ನು ಅ.7ರ ಬೆಳಗ್ಗೆ 11 ಗಂಟೆಗೆ ಕೊಡವ ಸಮಾಜದ ಹಿಂಭಾಗದ ಸಿ.ಎ.ನಿವೇಶನ 5ರಲ್ಲಿ ಏರ್ಪಡಿಸಲಾಗಿದೆ.

‘ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯ-ಸಮನ್ವಯ’ ಬಗ್ಗೆ ಪ್ರೊ.ಮೊಬರದ ಮಲ್ಲಿಕಾರ್ಜುನ ಅವರು ಉಪನ್ಯಾಸ ನೀಡುವರು. ಸಮಿತಿ ಅಧ್ಯಕ್ಷ ಹೆಚ್.ವಿ.ಬಸವರಾಜು ಹಿನಕಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಟಿ.ಸಿ.ಉದಯಕುಮಾರ್ ಇರಲಿದ್ದಾರೆ. ಸಾಹಿತಿ ನಂದೀಶ್ ಹಂಜೆ ಹಾಗೂ ನೂತನ ಪಾಲಿಕೆ ಸದಸ್ಯರ ಸನ್ಮಾನವನ್ನು ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: