ಕರ್ನಾಟಕಮೈಸೂರು

ಬೈಲಕುಪ್ಪೆಯ ಗಜಾನನ ಸೇವಾ ಸಮಿತಿ ವತಿಯಿಂದ 40ನೇ ವರ್ಷದ ಗೌರಿ ಗಣೇಶೋತ್ಸವ

ಬೈಲಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯ ಗಜಾನನ ಸೇವಾ ಸಮಿತಿ ವತಿಯಿಂದ ನಡೆದ 40ನೇ ವರ್ಷದ ಗೌರಿ ಗಣೇಶೋತ್ಸವ ಹಬ್ಬದ ಅಂಗವಾಗಿ ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಗಜಾನನ ಸೇವಾ ಸಮಿತಿ ಅಧ್ಯಕ್ಷ ರಾಮಕೃಷ್ಣ ನೇತೃತ್ವದಲ್ಲಿ ಯುವ ತಂಡಗಳು ಗೌರಿ-ಗಣೇಶನನ್ನು ವಿಸರ್ಜಿಸಿ ಸಂಭ್ರಮಿಸಿದರು. ಬೈಲಕುಪ್ಪೆಯ ವೆಂಕಟೇಶ್ ಬಡಾವಣೆಯಿಂದ ಅಲಂಕೃತವಾದ ಭವ್ಯ ಮಂಟಪದಲ್ಲಿ ಗಣೇಶನ ವಿಗ್ರಹವನ್ನು ಇರಿಸಿ ಡೊಳ್ಳು ಕುಣಿತ ಮತ್ತು ವೀರಗಾಸೆ ಸೇರಿದಂತೆ ಮೆರವಣಿಗೆಯೊಂದಿಗೆ ಮದ್ದುಗುಂಡುಗಳನ್ನು ಸಿಡಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಹಂದಿಗುಡ್ಡ ಕಾವಲಿನ ಇಂಗಾಲ ಕೆರೆಯಲ್ಲಿ ವಿಸರ್ಜಿಸಲಾಯಿತು. ಪ್ರಧಾನ ಅರ್ಚಕರಾದ ಮಹದೇವಪ್ಪ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಗಜಾನನ ಸೇವಾಸಮಿತಿ ಅಧ್ಯಕ್ಷರಾದ ರಾಮಕೃಷ್ಣ, ಸ್ಯಾನ್‍ಸಿಟಿ ಗಣೇಶ್‍, ಕಾರ್ಯದರ್ಶಿ ಸರೇಶ್, ಭರತ್‍ನಾರಿ, ಮಂಜುನಾಥ್‍, ಮುಂಜಾನೆ ಮಂಜು, ಲೋಕಿ, ಸಣ್ಣಹೈದಾ, ದರ್ಶನ್‍, ಮಿಲ್‍ಗೋವಿಂದ, ಬಿ.ಆರ್. ರಾಜೇಶ್, ನಿಕ್ಷೀತ್‍, ಮುಂತಾದವರು ಹಾಜರಿದ್ದರು.

Leave a Reply

comments

Related Articles

error: