ಮೈಸೂರು

ಅ.8ರಿಂದ 12ರವರೆಗೆ ಶಾಸ್ತ್ರೀಯ ಕನ್ನಡ ಪಠ್ಯಗಳ ಅನುವಾದ ಕಮ್ಮಟ’

ಕಿಟೆಲ್ ಕೋಶದ ಅಂತರ್ಜಾಲ ಸೇರ್ಪಡೆ

ಮೈಸೂರು,ಅ.5 : ಭಾರತೀಯ ಭಾಷಾ ಸಂಸ್ಥಾನ ವಿಭಾಗದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಿಂದ ‘ಶಾಸ್ತ್ರಿಯ ಕನ್ನಡ ಪಠ್ಯಗಳ ಅನುವಾದ ಕಮ್ಮಟ’ ವನ್ನು ಅ.8 ರಿಂದ 12ರವರೆಗೆ ಹಾಗೂ ಕಿಟೆಲ್ ಕೋಶದ ಅಂತರ್ಜಾಲ ಸೇರ್ಪಡೆಯನ್ನು ಸಂಸ್ಥೇಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ದಿ.8ರ ಬೆಳಗ್ಗೆ 10 ಗಂಟೆಗೆ ಮಂಗಳೂರಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ತಾಳ್ತಜೆ ವಸಂತ ಕುಮಾರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಹಿರಿಯ ವಿದ್ವಾಂಸ ಪ್ರೊ.ಅರ್ವಿಯಸ್ ಸುಂದರಂ ಇರುವರು. ಸಂಸ್ಥಾನದ ನಿರ್ದೇಶಕ ಪ್ರೊ.ಡಿ.ಜಿ.ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.

ಅ.12ರ ಸಂಜೆ 4 ಗಂಟೆಗೆ ನಡೆಯುವ ಸಮಾರೋಪದಲ್ಲಿ ಹಿರಿಯ ಜಾನಪದ ವಿದ್ವಾಂಸ ಪ್ರೊ.ಡಿ.ಕೆ.ರಾಜೇಂದ್ರ ಭಾಷಣ ಮಾಡಲಿದ್ದಾರೆ. ಶಾ.ಕ.ಅ.ಅ. ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಕೆ.ಆರ್.ದುರ್ಗಾದಾಸ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಅರ್)

Leave a Reply

comments

Related Articles

error: