ಮೈಸೂರು

ಮನುಷ್ಯತ್ವವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ರಕ್ತದಾನ ಮಾಡಿದಾಗ ಮೌಲ್ಯ ಮತ್ತಷ್ಟು ಹೆಚ್ಚಾಗುತ್ತದೆ : ಗುರುಮೂರ್ತಿ ಕೆ. ಬಿ

ಮೈಸೂರು,ಅ.6:-  ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್ ಕ್ರಾಸ್ ಯುವ ಘಟಕದ ವತಿಯಿಂದ ದೈನಂದಿನ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ನಿನ್ನೆ ನಡೆದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ  ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ  ಗುರುಮೂರ್ತಿ ಕೆ. ಬಿ, ಮಾತನಾಡಿ “ರಕ್ತದಾನವನ್ನು ಕೇವಲ ವ್ಯವಹಾರಕ್ಕೋಸ್ಕರವೇ ಮಾಡದೆ ಮನುಷ್ಯತ್ವವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಾಡಿದಾಗ ಅದರ ಮೌಲ್ಯ ಮತ್ತಷ್ಟು ಹೆಚ್ಚಾಗುತ್ತದೆ. ರಕ್ತದಾನ ಮಾಡುವಾಗ ಅದೇ ಗುಂಪಿನವರು ರಕ್ತ ಕೊಡಬೇಕೆಂಬ ನಿಯಮವಿಲ್ಲ. ಬದಲಿ ರಕ್ತದಾನದ ಮೂಲಕವೂ ಅವಶ್ಯಕತೆಯಿರುವವರಿಗೆ ಸಹಾಯ ಮಾಡಬಹುದು. ಹಲವು ಶಾಲಾ-ಕಾಲೇಜುಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳು ಇದ್ದು, ಇದರಿಂದ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ದ್ವಿಗುಣಗೊಳಿಸಬಹುದು, ಅವರಲ್ಲಿ ಕ್ರಿಯಾಶೀಲತೆಯೂ ಮೂಡುತ್ತದೆ” ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಸಭಾಪತಿ ಪ್ರೊ. ಎಂ. ಮಹದೇವಪ್ಪ ಮಾತನಾಡಿ ರೆಡ್ ಕ್ರಾಸ್ ಘಟಕದ ಹಿನ್ನಲೆ ಹಾಗೂ ಮಹತ್ವದ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿನಿಯರಿಗೂ ಕೂಡ ಮಾಹಿತಿ ತಿಳಿದಿರಬೇಕು. ರೆಡ್ ಕ್ರಾಸ್ ಯುವ ಘಟಕದವು ಒಗ್ಗಟ್ಟು, ಮಾನವೀಯತೆ, ಸಹಾಯಗುಣ, ಭ್ರಾತೃತ್ವತೆ ಮೊದಲಾದ ಆಂಶಗಳಿಗೆ ಹೆಚ್ಚು ಒತ್ತನ್ನು ನೀಡುತ್ತದೆ. ಇದರೊಂದಿಗೆ ನೇರ ನಡೆ-ನುಡಿ-ಚಿಂತನೆಯ ಸಮಗ್ರ ಮಹತ್ವದ ಅನಾವರಣವನ್ನು ಮಾಡಿದರು. ರಕ್ತದಾನ ಮಾಡುವ ಮೊದಲು ಅವರ ತೂಕ ಹಾಗೂ ವಯಸ್ಸಿನ ಸ್ಪಷ್ಟ ಮಾಹಿತಿ ಇರಬೇಕು” ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ  ಡಾ. ಎಂ. ಶಾರದ ವಹಿಸಿದ್ದರು. ವೇದಿಕೆಯಲ್ಲಿ ರೆಡ್ ಕ್ರಾಸ್ ಯುವ ಘಟಕ ಕಾರ್ಯಕ್ರಮಾಧಿಕಾರಿ ತ್ರಿವೇಣಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ  ಪವಿತ್ರ ಟಿ., ಆಂಗ್ಲಭಾಷ ವಿಭಾಗದ ಮುಖ್ಯಸ್ಥ ಪುನೀತ್ ಕುಮಾರ್ ಎಲ್. ಎಸ್. ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: