ಮೈಸೂರು

ಶಾಲಾ ಹಂತದಲ್ಲೇ ಸಮಾನತೆಯ ಅರಿವು ಮೂಡಿಸಬೇಕು: ಪ್ರೊ.ಎಚ್.ಗೋವಿಂದಯ್ಯ

ಬೈಲಕುಪ್ಪೆ: ಸಮಾನತೆ ಸಾರುವ ಸಾಂಸ್ಕೃತಿಕ ವೇದಿಕೆಯಾಗಿ ಶಾಲೆಗಳು ಪರಿವರ್ತನೆಯಾಗಬೇಕು ಎಂದು ಸಾಹಿತಿ ಮತ್ತು ಮಿಳಿಂದ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಎಚ್.ಗೋವಿಂದಯ್ಯ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕು ಗಿರಗೂರು ಗ್ರಾಮದ ಮಿಳಿಂದ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೊತ್ಸವ ಸಮಾರಂಭದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದರು. ಕಳೆದ ಎರೆಡು ವರ್ಷಗಳಿಂದ ಶಾಲೆಯಲ್ಲಿ ಸಾಂಸ್ಕೃತಿಕ ಸೌರಭ ಎಂಬ ಕಾರ್ಯಕ್ರಮವನ್ನು ರೂಪಿಸಿಕೊಂಡು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಮಕ್ಕಳನ್ನು ಹೆಚ್ಚು ತೊಡಗಿಸಲಾಗುತ್ತಿದೆ. ಜಾತಿ-ಆರ್ಥಿಕತೆಯ ಮೇಲುಕೀಳುಗಳನ್ನು ಬಿಟ್ಟು ಸಮಾನತೆ ಮನೋಭಾವದ ಬಗ್ಗೆ ವಿದ್ಯಾರ್ಥಿ ದಿನಗಳಿಂದಲೆ ಅರಿವು ಮೂಡಿಸುವ ಕೆಲಸ ನಡೆಯುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು

ಪುಟ್ಟಣ್ಣ ಕಣಗಾಲ್ ಅವರಂತಹ ಮೊತ್ತೊಬ್ಬ ಚಲನಚಿತ್ರ ನಿರ್ದೇಶಕ ಹುಟ್ಟಿಲ್ಲ ಎಂದ ಅವರು, ಶ್ರೇಷ್ಠ ನಿರ್ದೇಶಕರಾಗಿದ್ದ ಪುಟ್ಟಣ್ಣ, ಈ ತಾಲೂಕಿನ ಹೆಮ್ಮೆಯ ಪುತ್ರ. ಅವರನ್ನು ಸ್ಮರಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಈ ಶಾಲೆಯಲ್ಲಿ ಪುಟ್ಟಣ್ಣ ಅವರ ಹೆಸರಿನಲ್ಲಿ ಕಲಾ ಶಾಲೆಯನ್ನು ಆರಂಭಿಸಿ ವಿದ್ಯಾರ್ಥಿಗಳಿಗೆ ಕಲಾ ಕೊಡುಗೆ ನೀಡಬೇಕೆಂದು ಪುಟ್ಟಣ್ಣ ಕಣಗಾಲ್ ಅವರ ಪುತ್ರ ರಾಮು ಕಣಗಾಲ್ ಅವರಲ್ಲಿ ಮನವಿ ಮಾಡಿಕೊಂಡರು.

img_20161227_134432

ಗಾಂಧಿ ಪ್ರತಿಮೆಗೆ ಹೂವಿನ ಹಾರ ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ದಲಿತ ಮುಖಂಡ ಹರಿಹರ ಆನಂದ ಸ್ವಾಮಿ ಅವರು ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣವು ಸಮಾನತೆಯ ತತ್ವದಂತೆ ದೊರೆಯುತ್ತಿಲ್ಲ. ಆರ್ಥಿಕತೆಯ ಸ್ಥಿತಿಗತಿ ಮೇಲೆ ಶಿಕ್ಷಣ ಗುಣಮಟ್ಟ ಏರುಪೇರಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ಮಾತನಾಡಿ, ರಾಷ್ಟ್ರದಲ್ಲಿ ಏಕಶಿಕ್ಷಣ ಪದ್ಧತಿ ಜಾರಿಯಾಗಬೇಕು. ಶಿಕ್ಷಣವು ಪ್ರತಿಯೊಬ್ಬರಿಗೂ ದೊರೆಯುವಂತಾಗಬೇಕು ಎಂದರು. ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕ ತೆಗೆದ ಮಿಳಿಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರೊತ್ಸಾಹ ನೀಡುವುದಾಗಿ ಭರವಸೆ ನೀಡಿದರು.

ತಾ.ಪಂ. ಸದಸ್ಯ ಟಿ.ಈರಯ್ಯ ಮನೆ-ಮನೆ ಕವಿಗೋಷ್ಠಿ ಬಳಗದ ಅಧ್ಯಕ್ಷ ಕಂಪಲಪುರ ಮೋಹನ್, ಸೋಣಂಗೇರಿ ಬಯಲು ಚಿತ್ರಾಲಯದ ಮೋಹನ್ ಸೋನಾ ಮಾತನಾಡಿದರು.

dscn8884

ದಿವಂಗತ ಪುಟ್ಟಣ್ಣ ಕಣಗಾಲ್‌ ಅವರ ಧರ್ಮಪತ್ನಿ ನಾಗಲಕ್ಷ್ಮೀ ಅವರು ಶಾಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಕೈಗಳಿಂದ ಬಿಡಿಸಲಾದ ಚಿತ್ರಗಳನ್ನು ಛತ್ರಿಗಳನ್ನು ಬೇರ್ಪಡಿಸುವ ಮುಖಾಂತರ ಉದ್ಘಾಟನೆ ಮಾಡಿದರು. ವೇದಿಕೆಯಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪುಟ್ಟಣ್ಣರವರ ಸುಪುತ್ರ ರಾಮು ಕಣಗಾಲ್ ಅವರು ನೃತ್ಯ ಮಾಡುವ ಮೂಲಕ ಉದ್ಘಾಟಿಸಿದರು.

dscn8888

2015-16ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 567 ಅಂಕ ಪಡೆದ ವಿದ್ಯಾರ್ಥಿನಿ ಭವ್ಯ ಮತ್ತು ಆಕೆಯ ಪೋಷಕರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಡಿಡ್ ಸಂಸ್ಥೆಯ ಮುಖ್ಯಸ್ಥ ಡಾ.ಎಸ್. ಶ್ರಿಕಾಂತ್, ಪಿರಿಯಾಪಟ್ಟಣ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಡಿ.ರಮೇಶ್, ಕಾವೇರಿ ಸ್ವಚ್ಛಾತ ಅಭಿಯಾನದ ಸಂಚಾಲಕ ಎಂ.ಎನ್. ಚಂದ್ರಮೋಹನ್, ಗ್ರಾ.ಪಂ. ಸದಸ್ಯರಾದ ಉಷಾ, ಸಿ.ಎಸ್. ರೇಣುಕಾಸ್ವಾಮಿ, ಮಂಜುಳಾ, ಶಾಂತಮ್ಮ, ಸುಹಾಸಿನಿ, ಚಿಕ್ಕಮ್ಮ, ಬೈಲಕುಪ್ಪೆ ಪಿಡಿಒ ಶಿವಯೋಗ, ರಂಗಕಲಾವಿದ ಬರ್ಟಿ ಒಲಿವೆರಾ, ಕಸಾಪ ಅಧ್ಯಕ್ಷ ಬಿ.ಎಂ.ಶಿವಸ್ವಾಮಿ, ತಾಲೂಕು ಸುಸ್ಥಿರ ಅಭಿವೃದ್ಧಿ ಕೌಲಳ್ಳಿ ಸೋಮಶೇಖರ್, ಪಂಚವಳ್ಳಿ ಗ್ರಾಪಂ ಸದಸ್ಯ ಮುನವರ, ಮಿಳಿಂದ ವಿದ್ಯಾಸಂಸ್ಥೆಯ ಧರ್ಮದರ್ಶಿ ಅಣ್ಣಯ್ಯ, ಶಾಲೆಯ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಹಾಜರಿದ್ದರು.

ಶಾಲಾ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

 

– ರಾಜೇಶ್.

Leave a Reply

comments

Related Articles

error: