ಕ್ರೀಡೆಮೈಸೂರು

ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತರಾದ ಟಿಟಿಎಲ್ ಕಾಲೇಜು ವಿದ್ಯಾರ್ಥಿಗಳು

ಮೈಸೂರು,ಅ.6-ಪಿಯುಸಿ ವಿದ್ಯಾರ್ಥಿಗಳಿಗಾಗಿ ಮೈಸೂರು ವಿಶ್ವವಿದ್ಯಾನಿಲಯದ ಜಿಮ್ನಾಷಿಯಂ ಹಾಲ್ ನಲ್ಲಿ  ಆಯೋಜಿಸಿದ್ದ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಟಿಟಿಎಲ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

63 ಕೆಜಿಯೊಳಗಿನ ವಿಭಾಗದಲ್ಲಿ ಬಿ.ಚೇತನ್, 72 ಕೆಜಿಯೊಳಗಿನ ವಿಭಾಗದಲ್ಲಿ ವರುಣ್ ಪ್ರಥಮ ಸ್ಥಾನ ಗಳಿಸಿದ್ದು, 60 ಕೆಜಿಯೊಳಗಿನ ವಿಭಾಗದಲ್ಲಿ ಕೆ.ಎಸ್.ಸುಭಾಷ್, 65 ಕೆಜಿಯೊಳಗಿನ ವಿಭಾಗದಲ್ಲಿ ಅರುಣ್ ಕುಮಾರ್ ದ್ವಿತೀಯ ಸ್ಥಾನಗಳಿಸಿದ್ದಾರೆ.

ವಿಜೇತ ವಿದ್ಯಾರ್ಥಿಗಳೊಂದಿಗೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಪ್ರೊ.ಎಚ್.ಎನ್.ಅಶ್ವಥನಾರಾಯಣ, ನಿರ್ವಾಹಕ ಮತ್ತು ಉದ್ಯೋಗಿ ಅಧಿಕಾರಿ ಡಾ.ಬಿ.ವಿ.ಪ್ರಶಾಂತ್, ಟಿಟಿಎಲ್ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ನ ಪ್ರಾಂಶುಪಾಲರಾದ ಡಾ.ಎಂ.ಪ್ರೀತಿ, ದೈಹಿಕ ಶಿಕ್ಷಣ ನಿರ್ದೇಶಕ ಎಚ್.ಆರ್.ಗಿರೀಶ, ಟಿಟಿಎಲ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಹೃಷಿಕೇಶ ಅವರನ್ನು ಚಿತ್ರದಲ್ಲಿ ಕಾಣಬಹುದು. (ಎಂ.ಎನ್)

 

Leave a Reply

comments

Related Articles

error: