ಮೈಸೂರು

ಅ.9ರಂದು ಮೈಸೂರು ದಸರಾ ಪ್ರವಾಸಿಗರ ಸಾಂಪ್ರದಾಯಿಕ ಸ್ವಾಗತ

ಮೈಸೂರು,ಅ.6 : ಜನನಿ ಟ್ರಸ್ಟ್ ವತಿಯಿಂದ ದಸರಾ ಸಂಭ್ರಮಕ್ಕೆ ಆಗಮಿಸುವ ಪ್ರವಾಸಿಗರಿಗೆ ಗುಲಾಬಿ ಹೂ ನೀಡಿ, ಮೈಸೂರು ಪೇಟಾ ತೊಡಿಸಿ ನಂಜನಗೂಡಿನ ರಸಬಾಳೆ, ಮೈಸೂರಿನ ಚಿಗುರು ವೀಳ್ಯದೆಲೆ, ಮೈಸೂರು ಪಾಕ್ ಹಾಗೂ ಮೈಸೂರು ಮಲ್ಲಿಗೆ ನೀಡಿ, ಮಹಿಳೆಯರಿಗೆ ಬಳೆ ತೊಡಿಸಿ, ಸುಗಂಧದ್ರವ್ಯದೊಂದಿಗೆ ಪ್ರವಾಸಿಗರನ್ನು ಬರಮಾಡಿಕೊಲ್ಳುವ ಸಮಾರಂಭವನ್ನು ಅ.9ರಂದು ಏರ್ಪಡಿಸಲಾಗಿದೆ.

ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಉದ್ಘಾಟಿಸುವರು. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಪ್ರವಾಸಿಗರಿಗೆ ಸ್ವಾಗತ ಕೋರಲಿದ್ದಾರೆ. ಟ್ರಸ್ಟ್ ಅಧ್ಯಕ್ಷ ಡಾ.ಎಂ.ಕೆ.ಅಶೋಕ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ತನ್ವೀರ್ ಸೇಠ್, ನಾದೋಪಾಸನ ಗಾಯನ ತಂಡದ ಸ್ಥಾಪಕ ಅಧ್ಯಕ್ಷ ಡಿ.ಉದಯ್ ಶಂಕರ್, ವನ್ಯಜೀವಿ ಉಪಸಂರಕ್ಷಣಾಧಿಕಾರಿ ಸಿದ್ದರಾಮಪ್ಪ ಚಳಕಾಪುರೆ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಮೂರ್ತಿ ಹಾಗೂ ಇತರರು ಹಾಜರಿರಲಿದ್ದಾರೆ.

Leave a Reply

comments

Related Articles

error: