ಮೈಸೂರು

ನೃತ್ಯೋತ್ಸವ ಸಮಾರೋಪ ಸಮಾರಂಭ

ಮೈಸೂರಿನ ಜೆ.ಎಲ್.ಬಿ.ರಸ್ತೆಯಲ್ಲಿರುವ ವಾಸುದೇವಾಚಾರ್ಯ ಭವನದಲ್ಲಿ ಭಾರತೀಯ ನೃತ್ಯ ಕಲಾ ಪರಿಷತ್ ವತಿಯಿಂದ ನಾಟ್ಯಾಚಾರ್ಯ ಎಂ.ವಿಷ್ಣುದಾಸ್ ಸಂಸ್ಮರಣಾ ಇಪ್ಪತ್ತೈದನೆಯ ನೃತ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ  ಮಂಗಳವಾರ ಜರುಗಿತು.

ಕಾರ್ಯಕ್ರಮದಲ್ಲಿ 2015ರ ಸಾಲಿನ ಸಂಗೀತ, ನೃತ್ಯ ಅಕಾಡೆಮಿ ಪುರಸ್ಕೃತೆ ಡಾ.ಶೀಲಾ ಶ್ರೀಧರ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಸಮಾಜ ಸೇವಾ ರತ್ನ ಕೆ.ವಿ.ಮೂರ್ತಿ, ಕರ್ನಾಟಕ ಕಲಾಶ್ರೀ ಕುದ್ಕಾಡಿ ವಿಶ್ವನಾಥ ರೈ, ನಯನಾ ವಿ.ರೈ ನೃತ್ಯ ಕಲಾ ಪರಿಷತ್ ನ  ಅಧ್ಯಕ್ಷೆ ವಿದುಷಿ ಎ.ಚಂದ್ರಮತಿ, ಕಲಾ ವಿಮರ್ಶಕಿ ರಮಾ ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ಪುತ್ತೂರು ವಿಶ್ವಕಲಾನಿಕೇತನ ತಂಡದವರಿಂದ ಭರತನಾಟ್ಯ ವೈವಿಧ್ಯ ನಡೆಯಿತು.

Leave a Reply

comments

Related Articles

error: