ಕರ್ನಾಟಕ

ವಿವಿಧ ಭಾಷಣ ಸ್ಪರ್ಧೆಗೆ ಅರ್ಜಿ ಆಹ್ವಾನ

ಹಾಸನ (ಅ.5): ಹಾಸನ ಜಿಲ್ಲಾ ನೆಹರು ಯುವ ಕೇಂದ್ರವು ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾತ್ರ ಭಾವನೆ ಬೆಳೆಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟ್ರಮಟ್ಟದಲ್ಲಿ “ದೇಶ ಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾತ್ರ” ಎಂಬ ವಿಷಯದ ಬಗ್ಗೆ 18 ವರ್ಷದಿಂದ 29 ವರ್ಷದೊಳಗಿನ ಯುವ ಜನರಿಗೆ ಭಾಷಣ ಸ್ಪರ್ಧೆ ಏರ್ಪಡಿಸಿದ್ದು, ಆಸಕ್ತ ಯುವಜನರಿಂದ ಅರ್ಜಿ ಆಹ್ವಾನಿಸಿದೆ.

ಈ ಸ್ಪರ್ಧೆ ಆಂಗ್ಲ ಅಧವಾ ಹಿಂದಿ ಭಾಷೆಯಲ್ಲಿ ಮಾತ್ರ ಮಾಡಬಹುದಾಗಿದ್ದು, ಹಾಗೂ ಯಾವುದೇ ಟಿಪ್ಪಣಿ ಅಧವಾ ಚೀಟಿಯನ್ನು ಬಳಸದೆ ಭಾಷಣ ಮಾಡತಕ್ಕದ್ದು, ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಹತೆ: ಜಿಲ್ಲೆಯ 18 ವರ್ಷ ಮೇಲ್ಪಟ್ಟ 29 ವರ್ಷದೊಳಗಿನ ಯುವಕ, ಯುವತಿಯರು ಭಾಗವಹಿಸಬಹುದು ಭಾಷೆ ಹಿಂದಿ ಅಥವಾ ಆಂಗ್ಲ. ವಿಷಯ : “ದೇಶಭಕ್ತಿ ಮತ್ತು ರಾಷ್ಟ್ತ ನಿರ್ಮಾಣದಲ್ಲಿ ಯುವಜನರ ಪಾತ್ರ”. ಅರ್ಜಿ ಸಲ್ಲಿಸುವವರು ಈ ಜಿಲ್ಲೆಯವರಾಗಿರಬೇಕು, ಅದಕ್ಕನುಗುಣವಾಗಿ ಎಸ್.ಎಸ್.ಎಲ್.ಸಿ. ಅಂಕಪಟ್ಟಿ ನಕಲು ಪ್ರತಿ, ಆಧಾರ ಕಾರ್ಡ್ ಮತ್ತು 2 ಭಾವಚಿತ್ರ ನೀಡಬೇಕು.

ಸ್ಪರ್ಧಾ ಕ್ರಮ: ಪ್ರಥಮ ಹಂತ: ತಾಲ್ಲೂಕು ಮಟ್ಟದಲ್ಲಿ, ಆಯ್ಕೆ ನಡೆಸಲಿದ್ದು, ತಾಲ್ಲೂಕು ಸಂಘಟಕರು ನಿಗದಿಪಡಿಸಿದ ದಿನಾಂಕ, ಸ್ಥಳ ಹಾಗೂ ಸಮಯದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಪ್ರತಿ ತಾಲ್ಲೂಕಿನಿಂದ 03 ಜನರನ್ನು ಆಯ್ಕೆ ಮಾಡಲಾಗುತ್ತದೆ. ತಾಲ್ಲೂಕಿನಲ್ಲಿ ಸ್ಪರ್ಧಿಗಳು ಅವರವರ ಪ್ರಯಾಣ ಖರ್ಚು ಹಾಗೂ ಇತರೇ ಖರ್ಚುಗಳನ್ನು ಅವರೇ ಭರಿಸತಕ್ಕದ್ದು, ಆಯಾ ತಾಲ್ಲೂಕಿನವರು ಆಯಾ ತಾಲ್ಲೂಕಿನಲ್ಲಿಯೇ ಸ್ಪರ್ಧಿಸತಕ್ಕದ್ದು.

ದ್ವಿತೀಯ ಹಂತ: ತಾಲ್ಲೂಕಿನಲ್ಲಿ ಆಯ್ಕೆಯಾದ 03 ಜನ ಯುವಜನರನ್ನು ಜಿಲ್ಲಾ ಮಟ್ಟದ ಸ್ಪರ್ಧೆಗೆ ಕರಿಯಿಸಿಕೊಳ್ಳಲಾಗುವುದು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿÀಜೀತರಿಗೆ ರೂ.5000/-, ದ್ವಿತೀಯ ವಿಜೇತರಿಗೆ ರೂ.2000/-ತೃತೀಯ ವಿಜೇತರಿಗೆ ರೂ.1000/- ನೀಡಿ ಗೌರವಿಸಲಾಗುವುದು. ತಾಲ್ಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ಬಂದು ಹೋಗುವ ಸಾಮಾನ್ಯ ಬಸ್ಸಿನ ಅಥವಾ ರೈಲಿನ ಪ್ರಯಾಣ ಭತ್ಯೆಯನ್ನು ನೀಡಲಾಗುವುದು.

ತೃತೀಯ ಹಂತ: ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಂದಂತಹ ಯುವಕ ಅಥವಾ ಯುವತಿ ರಾಜ್ಯ ಮಟ್ಟದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು.

ತಾಲ್ಲೂಕು ಹಂತದಲ್ಲಿ ಭಾಗವಹಿಸುವವರು ಸ್ಪರ್ಧಾ ದಿನಾಂಕ ಮತ್ತಿತರ ಮಾಹಿತಿ ಪಡೆಯಲು ಹಾಸನ ತಾಲ್ಲೂಕು: ಸಿದ್ದೇಶ್ ಕುಮಾರ್ ಎಸ್.ಆರ್.- ಎನ್,ವೈ,ವಿ-9632648789, ಆಲೂರು ತಾಲ್ಲೂಕು ಮತ್ತು ಬೇಲೂರು ತಾಲ್ಲೂಕು: ಹರೀಶ ಕೆ.ಟಿ, ಎನ್,ವೈ,ವಿ- 9535315989,ಚನ್ನರಾಯಪಟ್ಟಣ ತಾಲ್ಲೂಕು: ಪರಿಸರ ಪುಟ್ಟಣ ಎನ್,ವೈ,ವಿ -8553582820. ಅರಕಲಗೂಡು ತಾಲ್ಲೂಕು ಮತ್ತು ಹೊಳೆನರಸೀಪುರ ತಾಲ್ಲೂಕು: ಉಮೇಶ ಎಕ್ಸ್, ಎನ್,ವೈ,ವಿ-9632292909 ಅರಸೀಕೆರೆ ತಾಲ್ಲೂಕು: ರುಮಾನ,ಎಕ್ಸ್, ಎನ್,ವೈ,ವಿ-9741366849, ಸಕಲೇಶಪುರ ತಾಲ್ಲೂಕು, ಚೈತ್ರ ಡಿ,ಎಸ್ ಎನ್,ವೈ,ವಿ- 9741642759, ಮತ್ತು :ನೆಹರು ಯುವ ಕೇಂದ್ರ ಹಾಸನ. 08172-246060. (ಎನ್.ಬಿ)

Leave a Reply

comments

Related Articles

error: