ಸುದ್ದಿ ಸಂಕ್ಷಿಪ್ತ

ಶ್ರೀ ಮಲೆ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ

ಮೈಸೂರು,ಅ.6-ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರವು ಕರ್ನಾಟಕ ರಾಜ್ಯ ಸರ್ಕಾರದ ಆಡಳಿತಕ್ಕೆ ಪಳಪಟ್ಟಿದ್ದು, ಪುರಾತನ ಕಾಲದಿಂದಲೂ ಬಹಳ ಹೆಸರುವಾಸಿಯಾದ ಪ್ರಖ್ಯಾತಿ ಹೊಂದಿರುವ ಧಾರ್ಮಿಕ ಕ್ಷೇತ್ರವಾಗಿದೆ.

ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ 2018ನೇ ಸಾಲಿನಲ್ಲಿ ಅ.9 ರವೆರೆಗೆ ಮಹಾಲಯ ಜಾತ್ರೆ, ಅ.17 ರಿಂದ 19 ರವರೆಗೆ ದಸರಾ ಜಾತ್ರೆ, ನವೆಂಬರ್ 6 ರಿಂದ 8 ರವರೆಗೆ ದೀಪಾವಳಿ ಜಾತ್ರೆಗಳು ನಡೆಯಲಿವೆ.

ನ.11, 12 ರಂದು ಮೊದಲನೇ ಕಾರ್ತಿಕ ಸೋಮವಾರ, ನ.18, 19 ಎರಡನೇ ಕಾರ್ತಿಕ ಸೋಮವಾರ, ನ.25, 26 ಮೂರನೇ ಕಾರ್ತಿಕ ಸೋಮವಾರ, ಡಿಸೆಂಬರ್ 2, 3 ನಾಲ್ಕನೇ ಕಾರ್ತಿಕ ಸೋಮವಾರ ಹಾಗೂ ಡಿಸೆಂಬರ್ 6, 7 ಎಣ್ಣೆಮಜ್ಜನ ಮತ್ತು ಅಮಾವಾಸ್ಯೆ ನಡೆಯಲಿದೆ ಎಂದು ಮಹದೇಶ್ವರಬೆಟ್ಟದ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: