ಸುದ್ದಿ ಸಂಕ್ಷಿಪ್ತ

ಮೈವಿವಿಗೆ ಕಾಯಂ ಕುಲಪತಿ ನೇಮಕಕ್ಕೆ ಆಗ್ರಹ

ಮೈಸೂರು,ಅ.6 : ಶತಮಾನೋತ್ಸವ ಆಚರಿಸಿಕೊಂಡಿರುವ ಮೈಸೂರು ವಿವಿಗೆ ಖಾಯಂ ಕುಲಪತಿಗಳನ್ನು ನೇಮಿಸದೆ ಸರ್ಕಾರ ನಿರ್ಲಕ್ಷ್ಯ ದೋರಣೆ ಅನುಸರಿಸುತ್ತಿದೆ ಎಂದು ವಿಶ್ವಮಾನ ವಿದ್ಯಾರ್ಥಿ ಯುವ ವೇದಿಕೆಯು ದೂರಿದೆ.

ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳುಗಳೇ ಕಳೆದರು ಕುಲಪತಿಗಳ ನೇಮಕದಲ್ಲಿ ಆಸಕ್ತಿ ವಹಿಸುತ್ತಿಲ್ಲ, ಇದರಿಂದಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಹಿನ್ನಡೆಯುಂಟಾಗಿದೆ, ಶೀಘ್ರದಲ್ಲಿಯೇ ಕುಲಪತಿಗಳನ್ನು ನೇಮಕಗೊಳಿಸಬೇಕು ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಅಧ್ಯಕ್ಷ ಸಿದ್ದರಾಜು ಭುಜಗನಪುರ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: