ಕರ್ನಾಟಕ

‘ಬಿಗ್ ಬಾಸ್’ ಕಡೆಯಿಂದ ಶ್ರೀಶಾಂತ್‍ಗೆ ಸಲ್ಲುತ್ತಿರುವ ಸಂಭಾವನೆ ಎಷ್ಟು?

ಬೆಂಗಳೂರು (ಅ.6):  ‘ಬಿಗ್ ಬಾಸ್’ ಮನೆಯಲ್ಲಿ ಅತಿ ಕಮ್ಮಿ ಸಂಭಾವನೆ ಪಡೆಯುತ್ತಿರುವ ಸೆಲೆಬ್ರಿಟಿ ಅಂದ್ರೆ ಅದು ಶ್ರೀಶಾಂತ್ ಎಂದು ಹೇಳಲಾಗುತ್ತಿದೆ! ಶ್ರೀಶಾಂತ್ ಗೆ ವಾರವೊಂದಕ್ಕೆ ‘ಬಿಗ್ ಬಾಸ್’ ಐದು ಲಕ್ಷ ರೂಪಾಯಿ ಸಂಭಾವನೆ ನೀಡುತ್ತಿದ್ದಾರೆ ಅಂತಲೇ ಗುಲ್ಲೆಬ್ಬಿತ್ತು. ಆದ್ರೀಗ, ಸೆಲೆಬ್ರಿಟಿಗಳ ಪೈಕಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವವರು ಶ್ರೀಶಾಂತ್ ಎನ್ನಲಾಗಿದೆ.

ಮೂಲಗಳ ಪ್ರಕಾರ, ಕ್ರಿಕೆಟರ್ ಶ್ರೀಶಾಂತ್ ಗೆ ವಾರವೊಂದಕ್ಕೆ ಐವತ್ತು ಲಕ್ಷಕ್ಕೂ ಹೆಚ್ಚು ಹಣವನ್ನ ಸಂಭಾವನೆಯಾಗಿ ನೀಡಲಾಗುತ್ತಿದೆ. ‘ಬಿಗ್ ಬಾಸ್’ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆದಿರುವ ಸ್ಪರ್ಧಿ ಅಂದ್ರೆ ಅದು ಶ್ರೀಶಾಂತ್ ಎನ್ನಲಾಗಿದೆ.

‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೊದಮೊದಲು ಶ್ರೀಶಾಂತ್ ಹಿಂದೇಟು ಹಾಕಿದರಂತೆ. ಆದ್ರೆ, ಕಲರ್ಸ್ ವಾಹಿನಿ ಹಾಗೂ ಸಲ್ಮಾನ್ ಒತ್ತಾಯಕ್ಕೆ ಮಣಿದು ಶೋಗೆ ಬರಲು ಶ್ರೀಶಾಂತ್ ಒಪ್ಪಿಕೊಂಡರಂತೆ. ‘ಬಿಗ್ ಬಾಸ್’ ಮನೆಯಲ್ಲಿ ಆಗಾಗ ಕಿತ್ತಾಟ, ಜಗಳದಿಂದ ಬೇಸೆತ್ತು ಹೊರಹೋಗುವುದಾಗಿ ಶ್ರೀಶಾಂತ್ ಹೇಳುತ್ತಿದ್ದಾರೆ. ಒಂದು ವೇಳೆ ‘ಬಿಗ್ ಬಾಸ್’ ಕಾರ್ಯಕ್ರಮದಿಂದ ಶ್ರೀಶಾಂತ್ ಹೊರನಡೆದರೆ, ಐವತ್ತು ಲಕ್ಷ ದಂಡ ತೆರಬೇಕಾಗುತ್ತದೆ.

‘ಬಿಗ್ ಬಾಸ್-12’ ಕಾರ್ಯಕ್ರಮದಲ್ಲಿ ಈ ವಾರ ಶ್ರೀಶಾಂತ್ ನಾಮಿನೇಟ್ ಆಗಿದ್ದಾರೆ. ಎಲಿಮಿನೇಷನ್ ನಿಂದ ಶ್ರೀಶಾಂತ್ ಸೇಫ್ ಆಗುತ್ತಾರಾ ಎಂಬ ಕುತೂಹಲ ಎಲ್ಲರಿಗೂ ಕಾಡುತ್ತಿದೆ. ಈ ನಡುವೆ ಶ್ರೀಶಾಂತ್ ರನ್ನ ಸೀಕ್ರೆಟ್ ರೂಮ್ ಗೆ ಕಳುಹಿಸುವ ಸಾಧ್ಯತೆ ಕೂಡ ಇದೆ. (ಎನ್.ಬಿ)

Leave a Reply

comments

Related Articles

error: