ದೇಶಪ್ರಮುಖ ಸುದ್ದಿ

ಮೋದಿ ವಿರುದ್ಧ ರಾಹುಲ್ ಟೀಕಾಸ್ತ್ರ: ಕಾಂಗ್ರೆಸ್’ನಲ್ಲೇ ಭೂಕಂಪನ!

ನಾನು ಮಾತಾಡಿದರೆ ಭೂಕಂಪನವಾಗುತ್ತದೆ ಎಂದು ಹೇಳಿದ್ದ ರಾಹುಲ್ ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೇ ತಿರುಗುಬಾಣವಾಗಿದೆ.

ಹೇಗೆ ಅಂತೀರಾ? ರಾಹುಲ್ ಪ್ರಧಾನಿ ವಿರುದ್ಧ ಮಾಡಿರುವ ಸಹಾರ ಕಂಪನಿಯ ಡೈರಿಯಲ್ಲಿದ್ದ ಹೆಸರುಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ಹೆಸರುಗಳೂ ಇವೆಯಂತೆ.

“ಮೋದಿಜೀ ವೈಯಕ್ತಿಕ ಭ್ರಷ್ಟಾಚಾರ ಮಾಡಿರುವ ದಾಖಲೆಗಳು ನನ್ನ ಬಳಿ ಇವೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಹಾರಾ ಕಂಪನಿಯಿಂದ ಕಪ್ಪ-ಕಾಣಿಕೆ ಪಡೆದಿರುವ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಈ ಬಗ್ಗೆ ನಾನು ಸಂಸತ್’ನಲ್ಲಿ ಮಾತನಾಡಿದರೆ ಭೂಕಂಪನವಾಗುತ್ತದೆ” ಎಂದೆಲ್ಲಾ ಹರಿಹಾಯ್ದಿದ್ದರು ರಾಹುಲ್.

ಆದರೆ ಇದೀಗ ಸ್ವಪಕ್ಷೀಯರ ಹೆಸರೇ ಈ ಭ್ರಷ್ಟಾಚಾರದ ಪಟ್ಟಿಯಲ್ಲಿರುವುದರಿಂದ ಕಾಂಗ್ರೆಸ್ ಪಕ್ಷದಲ್ಲೇ ಕಂಪನ ಶುರುವಾಗಿದೆ. ಅದೂ ಅಲ್ಲದೇ ದೆಹಲಿಯಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಅಭ್ಯರ್ಥಿ ಎನ್ನಲಾಗುತ್ತಿರುವ ಶೀಲಾ ದೀಕ್ಷಿತ್ ಅವರ ಹೆಸರೂ ಡೈರಿಯಲ್ಲಿದೆ ಎಂಬ ಮಾಹಿತಿಗಳು ಹೊರಬಿದ್ದಿವೆ.

ಶೀಲಾ ಸಬೂಬು

ಸಹಾರಾ ಕಂಪನಿಯ ಡೈರಿಯಲ್ಲಿರುವ ಹೆಸರುಗಳಲ್ಲಿ ತಮ್ಮ ಹೆಸರು ಇರುವುದನ್ನು ಕಂಡ ಶೀಲಾ ದೀಕ್ಷಿತ್ ಭಿನ್ನರಾಗ ಹಾಡಿದ್ದಾರೆ. “ಇದೆಲ್ಲಾ ಕಲ್ಪಿತ ಮಾತುಗಳು. ಆರೋಪಗಳಲ್ಲಿ ಸತ್ಯವಿಲ್ಲ. ಸಹಾರ ಡೈರಿಯ ಬಗ್ಗೆ ಸುಪ್ರೀಂ ಕೋರ್ಟ್ ಈಗಾಗಲೇ ವಿಚಾರಣೆ ನಡೆಸಿದೆ. ಇದೆಲ್ಲಾ ಮುಗಿದ ಕತೆ ಎಂದು ನುಣುಚಿಕೊಂಡಿದ್ದಾರೆ.

ಇದರಿಂದ ರಾಹುಲ್ ಪ್ರಯೋಗಿಸಿದ ಬಾಣ ಮೋದಿಯವರನ್ನು ತಲುಪುವ ಬದಲು ಕಾಂಗ್ರೆಸ್ ಪಾಳಯದ ಮೇಲೆಯೇ ಎರಗಿತು ಎಂದು ಕಾಂಗ್ರೆಸ್ ನಾಯಕರೇ ಗೊಣಗುತ್ತಿದ್ದಾರೆ.

Leave a Reply

comments

Related Articles

error: