ಮೈಸೂರು

ಅ.7ರಿಂದ ದಸರಾ ಚಲನಚಿತ್ರೋತ್ಸವಕ್ಕೆ ನೊಂದಣಿ ಪ್ರಾರಂಭ

ಮೈಸೂರು,ಅ.6-ದಸರಾ ಮಹೋತ್ಸವ 2018ರ ಅಂಗವಾಗಿ ಐನಾಕ್ಸ್ ಚಿತ್ರಮಂದಿರದಲ್ಲಿ ಅ.12 ರಿಂದ 17 ರವರೆಗೆ ಹಮ್ಮಿಕೊಳ್ಳಲಾಗಿರುವ ದಸರಾ ಚಲನಚಿತ್ರೋತ್ಸವಕ್ಕೆ ಅ.7 ರಿಂದ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ಧನ್ವಂತ್ರಿ ರಸ್ತೆಯಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನೋಂದಣಿ ಮಾಡಲಾಗುವುದು.
ವಲ್ಡ್   (world)  ಸಿನಿಮಾ, ಪನೋರಮ ಸಿನಿಮಾ, ಕನ್ನಡ ಮತ್ತು ಪ್ರಾದೇಶಿಕ ಸಿನಿಮಾಗಳನ್ನು ಐನಾಕ್ಸ್ 3 ಸ್ಕ್ರೀನ್‍ಗಳಲ್ಲಿ ಪ್ರದರ್ಶಿಸಲಾಗುವುದು. 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ವಲ್ಡ್  (world) ಸಿನಿಮಾ ಸ್ಕ್ರೀನ್‍ಗೆ ಪ್ರವೇಶವಿರುತ್ತದೆ. ದಸರಾ ಚಲನಚಿತ್ರೋತ್ಸವಕ್ಕೆ ನೊಂದಣಿ ಮಾಡಿಕೊಳ್ಳುವವರು ವಯೋಮಿತಿಯ ದಾಖಲಾತಿಗಾಗಿ ಆಧಾರ್ ಕಾರ್ಡ್/ ಮತದಾನದ ಗುರುತಿನ ಚೀಟಿ/ ಎಸ್.ಎಸ್.ಎಲ್.ಸಿ. ಅಂಕಪಟ್ಟಿ / ಅಥವಾ ಇತರೆ ಯಾವುದಾದರೂ ಒಂದು ದಾಖಲಾತಿಯ ಜೆರಾಕ್ಸ್ ಪ್ರತಿ  ಹಾಗೂ ಎರಡು ಪಾಸ್‍ಪೊರ್ಟ್ ಅಳತೆಯ ಭಾವಚಿತ್ರ ಸಲ್ಲಿಸಿ ಹೆಸರು ನೋಂದಾಯಿಸಿಕೊಳ್ಳುವುದು.
ನೋಂದಣಿಗೆ 300 ರೂ. ಗಳಾಗಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ.ಸಂ. 9448092049/ 8970543203 ನ್ನು ಸಂಪರ್ಕಿಸುವುದು. (ಎಂ.ಎನ್)

Leave a Reply

comments

Related Articles

error: