ಸುದ್ದಿ ಸಂಕ್ಷಿಪ್ತ

ಅರ್ಜಿ ಆಹ್ವಾನ

ಮೈಸೂರು,ಅ.6- ಐ.ಬಿ.ಪಿ.ಎಸ್  ವತಿಯಿಂದ ಸಿ.ಆರ್.ಪಿ. ಕ್ಲೆರಿಕಲ್ ಗ್ರೇಡ್-4 ಹುದ್ದೆಗಳಿಗೆ ಆನ್‍ಲೈನ್‍ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳಿಗೆ ವಿದ್ಯಾರ್ಹತೆ: ಯಾವುದಾದರೂ ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು. ವಯೋಮಿತಿ ಸಾಮಾನ್ಯ ವರ್ಗದವರಿಗೆ ಕನಿಷ್ಟ 20 ವರ್ಷ ಮತ್ತು ಗರಿಷ್ಟ 28 ವರ್ಷ, ಎಸ್.ಸಿ/ಎಸ್.ಟಿ ವರ್ಗದವರಿಗೆ ಹೆಚ್ಚಿನ 5 ವರ್ಷದ ಸಡಿಲಿಕೆ ಮತ್ತು ಓ.ಬಿ.ಸಿ. ವರ್ಗದವಿಗೆ 3 ವರ್ಷದ ಸಡಿಲಿಕೆ ಮತ್ತು ಅಂಗವಿಕಲರಿಗೆ 10 ವರ್ಷದ ಸಡಿಲಿಕೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಕೆಗಾಗಿ www.ibps.inವೆಬ್ ಸೈಟ್ ಗೆ ಭೇಟಿ ನೀಡಬಹುದು.

ಈ ಹುದ್ದೆಗಳ ನೇಮಕಾತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮೈಸೂರು, ಇಲ್ಲಿ ನುರಿತ ಉಪನ್ಯಾಸಕರಿಂದ ಉಚಿತ ಪರೀಕ್ಷಾ ಪೂರ್ವ ತರಬೇತಿಯನ್ನು ಅ.15 ರಿಂದ 31 ರವರೆಗೆ ಆಯೋಜಿಸಲಾಗುವುದು.

ಸದರಿ ಹುದ್ದೆಗೆ ಆನ್‍ಲೈನ್‍ನಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿರುವ & ಅರ್ಜಿ ಸಲ್ಲಿಸುವ ಅರ್ಹ ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರನ್ನು ಭಾವಚಿತ್ರದೊಂದಿಗೆ ಈ ಕಚೇರಿಗೆ ಖುದ್ದಾಗಿ ಬಂದು ನೊಂದಾಯಿಸಿಕೊಳ್ಳಬಹುದಾಗಿದೆ. ಈ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚಿನದಾಗಿ ಈ ಕಚೇರಿಯ ವತಿಯಿಂದ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ. ಈ ಕಚೇರಿಯಲ್ಲಿ ಲಭ್ಯವಿರುವ ವೃತ್ತಿ ಗ್ರಂಥಾಲಯವನ್ನು ಕಚೇರಿ ಕೆಲಸದ ವೇಳೆಯಲ್ಲಿ ಉಚಿತವಾಗಿ ಸದುಪಯೋಗಿಸಿಕೊಂಡು ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯನ್ನು ದೂ.ಸಂ.0821-2489972 ಅನ್ನು ಸಂಪರ್ಕಿಸಬಹುದಾಗಿದೆ. (ಎಂ.ಎನ್)

 

Leave a Reply

comments

Related Articles

error: