ಮೈಸೂರು

ರೈಲು ಸಂಚಾರ ರದ್ದು

ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ 12 ದಿನಗಳ ಕಾಲ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.

ಮೈಸೂರು-ಶ್ರವಣಬೆಳಗೊಳ –ಮೈಸೂರು ಪ್ಯಾಸೆಂಜರ್ ರೈಲು (56216/56215)ಸಂಚಾರವನ್ನು ಹಾಸನ-ಶ್ರವಣಬೆಳಗೊಳ ಮಾರ್ಗದಲ್ಲಿ ಜನವರಿ 3ರಿಂದ 14ರವರೆಗೆ ಭಾಗಶಃ ರದ್ದು ಮಾಡಲಾಗಿದೆ.

ಆದರೆ ಮೈಸೂರು-ಹಾಸನ-ಮೈಸೂರು ಮಾರ್ಗದಲ್ಲಿ ಈ ರೈಲು ಎಂದಿನಂತೆ ಸಂಚರಿಸಲಿದ್ದು, ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನೈಋತ್ಯ ರೈಲ್ವೆಯ ಮೈಸೂರು ವಿಭಾಗೀಯ ಕಚೇರಿಯ ಡಿವಿಜನಲ್ ಕಮರ್ಶಿಯಲ್ ಮ್ಯಾನೇಜರ್ ಡಾ.ಎಸ್.ಜಿ.ಯತೀಶ್ ತಿಳಿಸಿದ್ದಾರೆ.

Leave a Reply

comments

Related Articles

error: