ಮೈಸೂರು

ಪತ್ನಿ ಬಗ್ಗೆ ಅಪಪ್ರಚಾರ: ಪತಿ ವಿರುದ್ಧ ದೂರು

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಪತಿಯು ಪತ್ನಿಯ ಬಗ್ಗೆ ಅಪಪ್ರಚಾರ ನಡೆಸಿ ಚಾರಿತ್ರ್ಯ ವಧೆ ಮಾಡುತ್ತಿದ್ದಾನೆಂದು ಪತಿಯ ವಿರುದ್ಧ ಪ್ರೀತಿ ಎಂಬುವರು ನಜರ್‍ಬಾದ್ ಠಾಣೆಯಲ್ಲಿ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಯಾದವಗಿರಿ ನಿವಾಸಿ ಎನ್.ಎಸ್. ಪ್ರೀತಿ ಎಂಬುವವರಿಗೆ 2009ರಲ್ಲಿ ಕೀರ್ತಿಕುಮಾರರೊಂದಿಗೆ ವಿವಾಹ ನಡೆದಿತ್ತು. ಕೆಲ ದಿನಗಳು ಅನ್ಯೋನ್ಯವಾಗಿದ್ದ ದಂಪತಿಗಳ ಬದುಕಿನಲ್ಲಿ ಒಡಕು ಮೂಡಿ ವಿಚ್ಛೇದನಕ್ಕೆ ನ್ಯಾಯಾಲಯದ ಮೆಟ್ಟಿಲೇರಿತ್ತು.

ಈ ಸಮಯಲ್ಲಿ ಪತಿಯು ಪತ್ನಿ ಪ್ರೀತಿ ವಿರುದ್ಧ ಅನೈತಿಕ ಸಂಬಂಧದ ಆರೋಪ ಮಾಡಿ, ನಕಲಿ ಫೇಸ್ಬುಕ್ ಅಕೌಂಟ್ ಆರಂಭಿಸಿ ಎಡಿಟೆಡ್ ಫೋಟೋಗಳನ್ನು ಹಾಕುತ್ತಿದ್ದಾನೆ. ಆ ನಕಲಿ ಭಾವಚಿತ್ರಗಳನ್ನೇ ವಿಚ್ಛೇದನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಇದನ್ನು ಮನಗಂಡ ನ್ಯಾಯಾಧೀಶರು ಪತಿ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಲು ಪತ್ನಿಗೆ ಸೂಚಿಸಿದ್ದರು. ಇದರನ್ವಯ ಪ್ರೀತಿ ನಜರ್‍ ಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

comments

Related Articles

error: