
ದೇಶಪ್ರಮುಖ ಸುದ್ದಿ
ನ.8ರ ಬಳಿಕ ಕಾರು ಖರೀದಿ ಮೇಲೆ ಐಟಿ ಕಣ್ಣು
ನವದೆಹಲಿ: ನ.8ರ ನಂತರ ಕಾರು ಖರೀದಿಸಿದ್ದರೆ, ನಿಮ್ಮಮನೆಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರುವ ಸಾಧ್ಯತೆಗಳಿವೆ. ವಾಹನ ಖರೀದಿ ವೇಳೆ ನಗದು ರೂಪದಲ್ಲಿ ಹೆಚ್ಚು ಹಣ ಪಾವತಿಸಿದವರಿಗೆ ಮತ್ತು ಐಷಾರಾಮಿ ವಾಹನ ಖರೀದಿಸಿದವರಿಗೆ ಐಟಿ ನೋಟಿಸ್ ಬರುವುದು ಖಚಿತ.
ನ.8ರ ಬಳಿಕ ಕಾರು ಖರೀದಿಸಿದವರ ಮಾಹಿತಿ, ಹಣ ಪಾವತಿ ಮಾಹಿತಿ ಒದಗಿಸುವಂತೆ ದೇಶಾದ್ಯಂತ ಎಲ್ಲ ವಾಹನ ಡೀಲರ್ಗಳಿಗೂ ಆದಾಯ ತೆರಿಗೆ ಇಲಾಖೆ ಈಗಾಗಲೇ ನೋಟಿಸ್ ಜಾರಿ ಮಾಡಿದೆ. ಕೆಲವು ಡೀಲರ್ಗಳು ಮಾಹಿತಿಯನ್ನು ರವಾನಿಸಿದ್ದಾರೆ ಎನ್ನಲಾಗಿದೆ. ಕಾರು ಖರೀದಿಗೆ ಕಪ್ಪುಹಣ ಬಳಸಿರಬಹುದೆಂಬ ಶಂಕೆಯಲ್ಲಿ ಐಟಿ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಡೀಲರ್ಗಳು ನೀಡಿದ ಮಾಹಿತಿ ಮೇರೆಗೆ ವ್ಯವಹಾರದ ವಿವರಣೆ ಕೋರಿ ಗ್ರಾಹಕರಿಗೆ ನೋಟಿಸ್ ಜಾರಿ ಮಾಡಲಾಗುವುದು. ಜ.1ರ ಹೊಸ ವರ್ಷದ ನಂತರ ಈ ನೋಟಿಸ್ಗಳು ಗ್ರಾಹಕರ ಕೈಸೇರಲಿವೆ ಎನ್ನಲಾಗಿದೆ.