ಕರ್ನಾಟಕಪ್ರಮುಖ ಸುದ್ದಿ

‘ಸಾಲ ಮನ್ನಾ’ ಸರ್ಕಾರದ ಆದೇಶ: ರೈತ ಸಮುದಾಯವನ್ನು ಗೊಂದಲಕ್ಕೀಡು ಮಾಡುವಂತಿದೆಯೇ?

ಬೆಂಗಳೂರು (ಅ.8): ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಜೆಟ್ ನಲ್ಲಿ ಘೋಷಿಸಿದಂತೆ ರಾಜ್ಯದ ರೈತರ ಸಾಲ ಮನ್ನಾ ಕುರಿತು ಆದೇಶ ಹೊರಡಿಸಿದ್ದರೂ ಈ ಕುರಿತ ಗೊಂದಲ ಮಾತ್ರ ಇನ್ನೂ ಮುಂದುವರೆದಿದೆ.

ಈ ಮೊದಲು ಕುಟುಂಬದ ಒಬ್ಬರಿಗೆ ಮಾತ್ರ ಸಾಲ ಮನ್ನಾದ ಲಾಭ ಲಭಿಸುತ್ತದೆ ಎಂದು ಹೇಳಿದ್ದ ಸರ್ಕಾರ, ರೈತರಿಂದ ವಿರೋಧ ವ್ಯಕ್ತವಾದ ಬಳಿಕ ಸಾಲ ಪಡೆದ ರೈತರ ಕುಟುಂಬದ ಎಲ್ಲರಿಗೂ ಸಾಲ ಮನ್ನಾ ಭಾಗ್ಯ ಲಭಿಸುತ್ತದೆ ಎಂದು ಹೇಳಿತ್ತು. ಆದರೆ ಇದೀಗ ಹೊರ ಬಿದ್ದಿರುವ ಆದೇಶ ರೈತ ಸಮುದಾಯದಲ್ಲಿ ನಿರಾಸೆ ಉಂಟುಮಾಡಿದೆ. ಕುಟುಂಬದ ಮುಖ್ಯಸ್ಥ ಹಾಗೂ ಹೆಂಡತಿ, ಮಕ್ಕಳನ್ನು ಒಳಗೊಂಡಂತೆ ಒಂದು ಲಕ್ಷ ರೂ.ವರೆಗೆ ಸಾಲ ಹೊಂದಿದ್ದರೆ ಮಾತ್ರ ಎಲ್ಲರ ಮೇಲಿನ ಸಾಲ ಮನ್ನಾಗೆ ಋಣಮುಕ್ತ ಪತ್ರ ದೊರೆಯುತ್ತದೆ ಎನ್ನಲಾಗಿದೆ.

ಒಂದು ವೇಳೆ ಕುಟುಂಬದ ಓರ್ವ ಸದಸ್ಯ ಒಂದು ಲಕ್ಷ ರೂ.ಸಾಲ ಪಡೆದಿದ್ದರೆ ಆ ಸಾಲ ಮನ್ನಾ ಆಗಲಿದ್ದು, ಬಳಿಕ ಅದೇ ಕುಟುಂಬದ ಇತರೆ ಸದಸ್ಯರು ಪಡೆದ ಸಾಲ ಮನ್ನಾ ಆಗುವುದಿಲ್ಲವೆಂದು ಹೇಳಲಾಗಿದೆ. ಒಟ್ಟಿನಲ್ಲಿ ಸಾಲ ಮನ್ನಾ ಕುರಿತ ಗೊಂದಲ ಹಾಗೆಯೇ ಮುಂದುವರೆದಿದ್ದು, ರೈತ ಸಮುದಾಯ ತಮಗೆ ಇದರ ಲಾಭ ದೊರೆಯಲಿದೆಯೋ ಇಲ್ಲವೋ ಎಂಬ ಆತಂಕಕ್ಕೆ ಒಳಗಾಗಿದ್ದಾರೆ. (ಎನ್.ಬಿ)

Leave a Reply

comments

Related Articles

error: