
ಪ್ರಮುಖ ಸುದ್ದಿ
ಗುರುವಂದನ ಕಾರ್ಯಕ್ರಮ
ರಾಜ್ಯ(ಮಡಿಕೇರಿ)ಅ.8:-ಸೋಮವಾರಪೇಟೆಯ ಬ್ರಾಹ್ಮಣ ಸಮಾಜದ ವತಿಯಿಂದ ಸೋಮೇಶ್ವರ ದೇವಾಲಯದಲ್ಲಿ ಹೊಸದುರ್ಗದ ಶ್ರೀಕಾಂತಾನಂದ ಸರಸ್ವತಿ ಮಹಾರಾಜ್ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಗುರುವಂದನ ಕಾರ್ಯಕ್ರಮ ನಡೆಯಿತು.
ನಂತರ ಅವರು ಮಾತನಾಡಿ ಮನುಷ್ಯ ಕಾಯಕದಲ್ಲಿ ದೇವರನ್ನು ಕಾಣಬೇಕು. ಕಾಲಹಾನಿ ಮಾಡದೆ ತತ್ವನಿಷ್ಟನಾಗಿ ಕರ್ತವ್ಯ ಮಾಡಿದರೆ ಅದರ ಫಲ ದೊರೆಯುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮೈಸೂರಿನ ವಿಚಾರವಾದಿ ನಾಗೇಂದ್ರ ಪ್ರಸಾದ್, ದೇವಾಲಯದ ಪ್ರಧಾನ ಅರ್ಚಕ ಪ್ರಸನ್ನ ಭಟ್, ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್, ಸಮಾಜದ ಹಿರಿಯರಾದ ಎಸ್.ಎನ್.ಸೋಮಶೇಖರ್, ಎಸ್.ಗುಂಡಪ್ಪ, ಪದಾಧಿಕಾರಿಗಳಾದ ಎಸ್.ಡಿ.ವಿಜೇತ್, ಶ್ಯಾಮ ಸುಂದರ್, ಯಡೂರು ಹರೀಶ್, ಚಿತ್ರ ಕುಮಾರ್, ಸುದರ್ಶನ್ ಕೌಶಿಕ್, ವಸಂತ ರಮೇಶ್ ಇದ್ದರು.
ಶ್ರೀ ಸೋಮೇಶ್ವರ ದೇವಾಲಯದ ಶ್ರೀ ಶಕ್ತಿ ಪಾರ್ವತಿ ಸನ್ನಿಧಿಯಲ್ಲಿ ಅ.10ರಿಂದ 19ರ ವರೆಗೆ ಶರನ್ನವರಾತ್ರಿ ಉತ್ಸವ ನಡೆಯಲಿದೆ. 10ರಂದು 7 ಗಂಟೆಗೆ ದೇವಿ ವಿಗ್ರಹವನ್ನು ಮೆರವಣಿಗೆಯ ಮೂಲಕ ತಂದು ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ನಂತರ ಪ್ರತೀ ದಿನ ವಿವಿಧ ಅಭಿಷೇಕ ಪೂಜ ಕಾರ್ಯಗಳು ನಡೆಯಲಿದೆ. 19ರಂದು ಸಂಜೆ 03ಗಂಟೆಗೆ ಆನೆ ಕೆರೆಯಲ್ಲಿ ದೇವಿ ವಿಗ್ರಹವನ್ನು ವಿಸರ್ಜನೆ ಮಾಡಲಾಗುತ್ತದೆ. (ಕೆಸಿಐ,ಎಸ್.ಎಚ್)