ಮೈಸೂರು

ತ್ರಿಮತಸ್ಥ ಬ್ರಾಹ್ಮಣ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ : ಅರ್ಜಿ ಆಹ್ವಾನ

ಮೈಸೂರು,ಅ.8 : ನಗರದ ಆದರ್ಶ ಸೇವಾ ಸಂಘದ ವತಿಯಿಂದ 2018ರಲ್ಲಿ ನಡೆದ ವಿವಿಧ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳಿಸಿರುವ ತ್ರಿಮತಸ್ಥ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಏರ್ಪಡಿಸಲಾಗಿದೆ.

ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇ.90ಕ್ಕಿಂತಲೂ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳು, ಡಿಪ್ಲೋಮಾ, ಪದವಿ, ಸ್ನಾತಕೋತ್ತರ, ವೈದ್ಯಕೀಯ, ಇಂಜಿನಿಯರಿಂಗ್ ಪದವಿಗಳ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರವನ್ನು ನೆರವೇರಿಸಲಾಗುವುದು. ಇವರೊಂದಿಗೆ ರಾಜ್ಯ, ರಾಷ್ಟ್ರಮಟದಲ್ಲಿ ಕ್ರೀಡೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಸೇವೆ ಇತ್ಯಾದಿ ಮೂಲಕ ಪ್ರತಿಭೆ ಮೆರೆದವರು ಅರ್ಜಿ ಸಲ್ಲಿಸಬಹುದಾಗಿದೆ.

ಆಸಕ್ತ ಅರ್ಹ ತ್ರಿಮಸ್ಥ ಬ್ರಾಹ್ಮಣ ವಿದ್ಯಾರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಸಂಘದ ಕಚೇರಿ ನಂ.2, ಬ್ಲಾಕ್ 27, ಮಧುವನ ಬಡಾವಣೆ, ಶ್ರೀರಾಂಪುರ 2ನೇ ಹಂತ, ಮೈಸೂರು ಇಲ್ಲಿ ಪಡೆಯಬಹುದಾಗಿ ಅರ್ಜಿ ಸಲ್ಲಿಸಲು ಅ.20 ಕೊನೆಯ ದಿನ ಎಂದು ಕಾರ್ಯದರ್ಶಿ ಆರ್.ರಾಮಕೃಷ್ಣ ಪ್ರಕಟಣೆಯಲ್ಲಿ ಕೋರಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: