
ಕರ್ನಾಟಕ
ಬೆಂಗಳೂರು, ಮೈಸೂರಿನಲ್ಲಿ ಫೆ.2ರಿಂದ ಸಿನಿಮೋತ್ಸವ
ಒಂಬತ್ತನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಮುಂದಿನ ಫೆ.2ರಿಂದ 9ರವರೆಗೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಏಕಕಾಲದಲ್ಲಿ ನಡೆಯಲಿದೆ. ವಿಶ್ವದ 50 ದೇಶಗಳ ಸುಮಾರು 180 ಸುಪ್ರಸಿದ್ಧ ಚಿತ್ರಗಳು ಉತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.
ವಾರ್ತಾ ಸೌಧದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಾರ್ತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮೀ ನಾರಾಯಣ, ಬೆಂಗಳೂರಿನ ರಾಜಾಜಿನಗರ ಒರಾಯನ್ ಮಾಲ್, ಪಿವಿಆರ್ ಸಿನಿಮಾಸ್’ನ ಹನ್ನೊಂದು ಹಾಗೂ ಮೈಸೂರಿನ ಐನಾಕ್ಸ್ ಸಿನಿಮಾಸ್’ನ ನಾಲ್ಕು ಪರದೆಯಲ್ಲಿ ದಿನನಿತ್ಯ 75 ಚಿತ್ರಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಫೆ.2 ರಂದು ವಿಧಾನಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿನಿಮೋತ್ಸವ ಉದ್ಘಾಟಿಸಲಿದ್ದಾರೆ. ಮೈಸೂರಿನಲ್ಲಿ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.