ಮೈಸೂರು

ಪ್ರಸಾದ್ ಸ್ಕೂಲ್ ಆಫ್ ರಿದಂಸ್ ವಿದ್ಯಾರ್ಥಿಗಳು ಉನ್ನತ ಸಾಧನೆ

ಮೈಸೂರು,ಅ.8- ನಗರದ ಕೆ.ಆರ್.ಮೊಹಲ್ಲಾದಲ್ಲಿರುವ ಪ್ರಸಾದ್ ಸ್ಕೂಲ್ ಆಫ್ ರಿದಂಸ್ ಸಂಸ್ಥೆಯಲ್ಲಿ ಲಂಡನ್ನಿನ ಟ್ರಿನಿಟಿ ಕಾಲೇಜಿನಿಂದ ನಡೆಸಿದ ವಾರ್ಷಿಕ ಡ್ರಮ್ಸ್ ಪರೀಕ್ಷೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಪ್ರಸಾದ್ ಸ್ಕೂಲ್ ಆಫ್ ಲಂಡನ್ನಿನ ಪ್ರಾಂಶುಪಾಲ ರಾಘವೇಂದ್ರ ಪ್ರಸಾದ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷೆಯಲ್ಲಿ ೨೦ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶಾಲೆಯ ರಚನಾ ವರ್ಷ ಬಾಲಶ್ರೀ ಹಾಗೂ  ಆದಿತ್ಯ ಭಾರದ್ವಾಜ್ ‘ಯುವಶ್ರೀ ಪ್ರಶಸ್ತಿ ಪಡೆದಿದ್ದಾರೆ. ಚಿರಂಜೀವಿ ಮ್ಯಾಥ್ಯೋಪಾಲ್ ಭಾರತೀಯ ನೌಕಾಪಡೆಗೆ ಡ್ರಮ್ಮರ್ ಆಗಿ ಆಯ್ಕೆಯಾಗಿದ್ದಾರೆ ಎಂದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.

ಕಲಾವಿದ ವಿದ್ವಾನ್ ಕೃಷ್ಣಮೂರ್ತಿ ಹಾಗೂ ಸಂಸ್ಥೆಯ ಪೋಷಕರಾದ ಡಾ.ಎಂ.ಪಿ.ವರ್ಷ, ವಿ.ನಾಗೇಶ್, ಶ್ರೀನಿವಾಸಬಾಬು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: