ಮೈಸೂರು

ಜ.5,6ರಂದು ಚಿತ್ರದುರ್ಗದಲ್ಲಿ ಮಡಿವಾಳರ ಜಾಗೃತಿ ಸಮ್ಮೇಳನ

ಮೈಸೂರು,ಅ.8-ಜಿಲ್ಲಾ ಹಾಗೂ ರಾಜ್ಯ ಮಡಿವಾಳರ ಸಂಘದ ವತಿಯಿಂದ ಚಿತ್ರದುರ್ಗದ ಮಾಚಿದೇವ ಮಹಾಸಂಸ್ಥಾನ ಮಠದಲ್ಲಿ ಜ.5, 6ರಂದು ಜಾಗೃತಿ ಮಹಾ ಸಮ್ಮೇಳನ ಮತ್ತು ಬಸವ ಮಾಚಿದೇವ ಸ್ವಾಮೀಜಿ ಅವರ ಪಟ್ಟಾಭಿಷೇಕ ಮಹೋತ್ಸವವನ್ನು ಏರ್ಪಡಿಸಲಾಗಿದೆ ಎಂದು ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ಸಿ.ನಂಜಪ್ಪ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.5ರಂದು ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸುವರು ಎಂದರು.

ಇದೇ ವೇಳೆ ಮಡಿವಾಳರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಸಮುದಾಯದ ನಿರಾಶ್ರಿತರಿಗಾಗಿ ಸರ್ಕಾರದಿಂದ ಮೂಲ ಸೌಕರ್ಯ ನೀಡಬೇಕು, ಮಡಿವಾಳ ಮಾಚಿದೇವರ ಸ್ಮಾರಕಗಳ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ವಸತಿ ಹಾಗೂ ಪ್ರಸಾದ ನಿಲಯಗಳನ್ನು ಸ್ಥಾಪಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಡಲಾಗುವುದು ಎಂದರಲ್ಲದೆ, ಕಳೆದ ೧೫ ದಿನಗಳಿಂದ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಬೇಡಿಕೆಯಿಟ್ಟು ಯಾತ್ರೆ ನಡೆಸಲಾಗುತ್ತಿದೆ.

ಸಂಘದ ಪದಾಧಿಕಾರಿಗಳಾದ ರಂಗಸ್ವಾಮಯ್ಯ, ಚಂದ್ರಶೇಖರ ಭೈರಿ, ಚನ್ನಕೇಶವ, ಮಹಿಳಾಧ್ಯಕ್ಷೆ ವಿಜಯಲಕ್ಷ್ಮಿ, ಉಪಾಧ್ಯಕ್ಷ ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: