ಲೈಫ್ & ಸ್ಟೈಲ್

ನಟ್ಸ್ ಸೇವಿಸಿ: ಥೈರಾಯ್ಡ್ ನಿಯಂತ್ರಿಸಿ

ಥೈರಾಯ್ಡ್ ಇತ್ತೀಚೆಗೆ ಜನತೆಯಲ್ಲಿ ಹೆಚ್ಚುತ್ತಿರುವ ಗಂಟಲಿಗೆ ಸಂಬಂಧಿಸಿದ ಒಂದು ಸಮಸ್ಯೆ. ದೇಹದಲ್ಲಿ ಅಯೋಡಿನ್ ಕೊರತೆ ಉಂಟಾದಾಗ ಥೈರಾಯ್ಡ್ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಸ್ತ್ರೀಯರಲ್ಲಿ ಬಂಜೆತನವೂ ಕಾಣಿಸಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಮಕ್ಕಳಾಗಿಲ್ಲ ಎಂದು ವೈದ್ಯರ ಬಳಿ ತೆರಳಿದರೆ ನಿಮಗೆ ಮೊದಲು ಥೈರಾಯ್ಡ್ ಪರೀಕ್ಷೆಯನ್ನೇ ಮಾಡಿಸಲು ಹೇಳುತ್ತಾರೆ. ಥೈರಾಕ್ಸಿನ್ ಹಾರ್ಮೋನ್ ನಿಂದಾಗಿ ಬರುವ ಈ ಸಮಸ್ಯೆಯನ್ನು ‘ಗಳಗಂಡ ‘ ಅಂತಲೂ ಕರೆಯಲಾಗುತ್ತದೆ.

ಹಾಗಾದರೆ ಇದನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ನಾವು ಆಹಾರದಲ್ಲಿ ಇವುಗಳನ್ನು ಸೇವಿಸಲೇಬೇಕಿದೆ.

nuts-webನಟ್ಸ್ : ಪ್ರತಿದಿನವೂ ಒಂದಲ್ಲ ಒಂದು ನಟ್ಸ್ ಸೇವಿಸುತ್ತಲೇ ಇರಿ. ಇವುಗಳಲ್ಲಿ ಸೊಲೆನಿಯಮ್ ಅಂಶ ಇರುವುದರಿಂದ ಥೈರಾಯ್ಡ್ ನಿಂದ  ಉಂಟಾಗುವ ಹಾರ್ಟ್ ಅಟ್ಯಾಕ್ ನ್ನು ತಡೆಯುವಲ್ಲಿ ಸಹಕರಿಸುತ್ತದೆ.

ccurd-webಮೊಸರು : ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಥೈರಾಯ್ಡ್ ನ್ನು ನಿಯಂತ್ರಣದಲ್ಲಿರಿಸುತ್ತದೆ.

egg-8webಮೊಟ್ಟೆ : ಇದರಲ್ಲಿರುವ ಸೆಲೆನಿಯಂ ಥೈರಾಯ್ಡ್ ಬರದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

menthikura1-webಮೆಂತ್ಯ ಸೊಪ್ಪು : ಇದರಲ್ಲಿರುವ ಆ್ಯಂಟಿ ಆ್ಯಕ್ಸಿಡೆಂಟ್ಸ್ ಥೈರಾಯ್ಡ್ ಹಾರ್ಮೋನ್ ನನ್ನು ನಿಯಂತ್ರಣದಲ್ಲಿರಿಸಲು ಸಹಾಯ ಮಾಡುತ್ತದೆ.

mashroom-webಮಶ್ರೂಮ್ : ಇದರಲ್ಲಿ ಸೆಲೆನಿಯಂ ಅಂಶವು ಹೇರಳವಾಗಿದ್ದು, ಥೈರಾಯ್ಡ್ ಸಮಸ್ಯೆಯನ್ನು ನಿಯಂತ್ರಣದಲ್ಲಿರಿಸುತ್ತದೆ.

cheese-webಬೆಣ್ಣೆ : ಇದರಲ್ಲಿ ಕ್ಯಾಲ್ಶಿಯಂ ಅಂಶ ಹೇರಳವಾಗಿದ್ದು, ಥೈರಾಯ್ಡ್ ಬರದಂತೆ ತಡೆಯಲು ನೆರವಾಗುತ್ತದೆ.

milk-webಹಾಲು : ಇದರಲ್ಲಿಯೂ ಕ್ಯಾಲ್ಶಿಯಂ ಪ್ರಮಾಣ ಹೇರಳವಾಗಿದ್ದು, ಥೈರಾಕ್ಸಿನ್ ಹಾರ್ಮೋನ್ ಅನ್ನು ನಿಯಂತ್ರಣದಲ್ಲಿಡುತ್ತದೆ.

fish-webಮೀನು : ಇದರಲ್ಲಿ ಒಮೇಗಾ 3 ಅಂಶವು ಥೈರಾಯ್ಡ್ ಅಂಶವನ್ನು ನಾರ್ಮಲ್ ಇರಿಸಲಿದೆ.

Leave a Reply

comments

Related Articles

error: