ಮೈಸೂರು

ಇಂದು ಮಳೆಯ ಕಾರಣದಿಂದ ದಸರಾ ಆನೆಗಳ ತಾಲೀಮಿಗೆ ಬ್ರೇಕ್

ಮೈಸೂರು,ಅ.9:- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2018ರ ಹಿನ್ನೆಲೆಯಲ್ಲಿ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳು ತಾಲೀಮು ನಡೆಸುತ್ತಿದ್ದವು. ಆದರೆ ಇಂದು ಮಳೆಯ ಕಾರಣದಿಂದ ತಾಲೀಮಿಗೆ ಬ್ರೇಕ್ ಬಿದ್ದಿದೆ.

ತಾಲೀಮು ಇಲ್ಲದೆ ಅರಮನೆ ಆವರಣದಲ್ಲಿಯೇ ದಸರಾ ಆನೆಗಳು ಕಾಲ ಕಳೆಯುತ್ತಿವೆ.ತುಂತುರು ಮಳೆಯಿಂದಾಗಿ ಆನೆಗಳ ತಾಲೀಮಿಗೆ‌ ಬ್ರೇಕ್ ಬಿದ್ದಿದೆ. ಬೆಳಗ್ಗೆಯಿಂದ ಬೀಳುತ್ತಿದ್ದ ತುಂತುರು ಮಳೆ ಹಿನ್ನೆಲೆಯಲ್ಲಿ ತಾಲೀಮು ರದ್ದುಪಡಿಸಲಾಗಿದೆ. ದಸರಾ ಗಜಪಡೆ ಅರಮನೆ ಆವರಣದಲ್ಲಿಯೇ  ಸ್ವಚ್ಛಂದವಾಗಿ ವಿಹರಿಸಿವೆ.  ನಿನ್ನೆ ಕೂಡ ಅಮವಾಸ್ಯೆ ಪ್ರಯುಕ್ತ ದಸರಾ ಗಜಪಡೆಗೆ ತಾಲೀಮು ನಡೆಸಿರಲಿಲ್ಲ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: