
ಮೈಸೂರು
ಕಾಂಗ್ರೆಸ್ ಉತ್ತಮ ಪಕ್ಷವಾಗಿ ಎದ್ದು ನಿಲ್ಲಲಿದೆ : ಡಾ.ಬಿ.ಜೆ.ವಿಜಯಕುಮಾರ್ ವಿಶ್ವಾಸ
ಕಾಂಗ್ರೆಸ್ ಉತ್ತಮ ಪಕ್ಷವಾಗಿ ಎದ್ದು ನಿಲ್ಲಲಿದೆ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮೈಸೂರಿನ ಗಾಂಧಿವೃತ್ತದ ಬಳಿ ಆಯೋಜಿಸಲಾದ 132ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಸಮಾರಂಭವನ್ನು ಪಕ್ಷದ ಧ್ವಜಾರೋಹಣ ನಡೆಸಿ, ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದಾದಾಬಾಯಿ ನವರೋಜಿ ಕಾಂಗ್ರೆಸ್’ನ ಮೊದಲ ಅಧ್ಯಕ್ಷತೆ ವಹಿಸಿದ್ದರು.
ಮಹಾತ್ಮಾ ಗಾಂಧೀಜಿಯವರು ದಲಿತರಿಗಾಗಿ ನಿಧಿ ಸಂಗ್ರಹಿಸಲು ಇದೇ ಗಾಂಧಿ ವೃತ್ತಕ್ಕೆ ಬಂದಿದ್ದರು ಎಂದು ಹೇಳುವ ಮೂಲಕ ಇತಿಹಾಸವನ್ನು ನೆನಪಿಸಿಕೊಂಡರು. ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ಕಟ್ಟಲು ಪಣತೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸಬೇಕೆನ್ನುವ ಆತ್ಮಸ್ಥೈರ್ಯ ಹೆಚ್ಚಿದೆ. ಕಾಂಗ್ರೆಸ್ ಉತ್ತಮ ಪಕ್ಷವಾಗಿ ಹೊರಹೊಮ್ಮಲಿದೆ ಎಂದರು.
ವೇದಿಕೆಯಲ್ಲಿ ಮಾಜಿ ಸಂಸದ ಹೆಚ್.ವಿಶ್ವನಾಥ, ಶಾಸಕ ಕೆ.ವೆಂಕಟೇಶ್, ಎಚ್.ಪಿ.ಮಂಜುನಾಥ್, ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್.ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.