ಕರ್ನಾಟಕಮನರಂಜನೆ

ದೊಡ್ಡ ಚಿತ್ರವೊಂದರ ನಿರ್ಮಾಣ ಕೈಗೆತ್ತಿಕೊಂಡಿದ್ದಾರೆ ಪ್ರಿಯಾ ಸುದೀಪ್!

ಬೆಂಗಳೂರು (ಅ.9): ನಟ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಅವರು ದೊಡ್ಡ ಚಿತ್ರವೊಂದರ ನಿರ್ಮಾಣವನ್ನು ಕೈಗೆತ್ತಿಕೊಂಡಿದ್ದಾರೆ ಎನ್ನಲಾಗಿದ್ದು, ಅವರ ಈ ಸಾಹಸಕ್ಕೆ ಪತಿ ಸುದೀಪ್ ಅವರು ಪತ್ನಿಯ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.

ಪ್ರಿಯಾ ಅವರು 100 ಕೋಟಿಯ ಬಜೆಟ್ ಚಿತ್ರ ನಿರ್ಮಾಣಕ್ಕೆ ಮಾಡುತ್ತಾರಂತೆ. ಈ ರೀತಿಯ ಸುದ್ದಿಯೊಂದು ಈಗ ಶುರುವಾಗಿದೆ. ಸುದೀಪ್ ಈಗಾಗಲೇ ತಮ್ಮ ಕಿಚ್ಚ ಕ್ರಿಯೇಷನ್ಸ್ ಮೂಲಕ ಕೆಲ ಸಿನಿಮಾಗೆ ಬಂಡವಾಳ ಹಾಕಿದ್ದು, ಇದೇ ಮೊದಲ ಬಾರಿಗೆ ಈ ಮಟ್ಟದ ಸಿನಿಮಾ ನಿರ್ಮಾಣ ಮಾಡುವ ತಯಾರಿ ನಡೆಯುತ್ತಿದೆ.

ಸುದೀಪ್ ಈ ಹಿಂದೆ ‘ವೀರ ಮದಕರಿ’ ಸಿನಿಮಾ ಮಾಡಿದ್ದರು. ಆದರೆ ಈಗ ಅವರು ‘ರಾಜಾ ವೀರ ಮದಕರಿ’ ಚಿತ್ರವನ್ನ ಮಾಡುವ ಪ್ಲಾನ್ ಮಾಡಿದ್ದಾರಂತೆ. ಚಿತ್ರದುರ್ಗದ ಮದಕರಿ ನಾಯಕರ ಜೀವನಾಧಾರಿತ ಸಿನಿಮಾ ಇದಾಗಿದೆಯಂತೆ. ಮದಕರಿ ನಾಯಕರ ಶೌರ್ಯವನ್ನ ಈ ಸಿನಿಮಾ ಮೂಲಕ ಪ್ರೇಕ್ಷಕರ ಕಣ್ಮುಂದೆ ತರುವುದು ಈ ಚಿತ್ರ ನಿರ್ಮಾಣದ ಉದ್ದೇಶವಾಗಿದೆ.

ಈ ಚಿತ್ರದ ಮೂಲಕ ಅವರು ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಈ ಚಿತ್ರದ ಕೆಲಸಗಳು ಈಗಾಗಲೇ ಶುರುವಾಗಿದೆಯಂತೆ. ಈ ಚಿತ್ರ ಕನ್ನಡದ ಜೊತೆಗೆ ಇನ್ನೂ ಎರಡು ಭಾಷೆಗಳಲ್ಲಿ ನಿರ್ಮಾಣ ಆಗಲಿಯಂತೆ. ಕನ್ನಡದಲ್ಲಿ‌ ಈ ಸಿನಿಮಾಗೆ ಸುದೀಪ್ ನಾಯಕರಾಗಿದ್ದು, ಬೇರೆ ಭಾಷೆಯಲ್ಲಿಯೂ ಅವರೇ ಇರುತ್ತಾರಾ ಎಂಬ ಬಗ್ಗೆ ಇನ್ನೂ ಗೊತ್ತಾಗಿಲ್ಲ.

ಈ ಸಿನಿಮಾದ ಬಜೆಟ್ ಕೇಳಿದಾಗ ಮೊದಲು ಎಲ್ಲರಿಗೂ ಆಶ್ಚರ್ಯ ‌ಆಗುತ್ತದೆ. 100 ಕೋಟಿ ಬಜೆಟ್ ನಲ್ಲಿ ಕನ್ನಡದಲ್ಲಿ ಸಿನಿಮಾ ಮಾಡಲು ಸಾಧ್ಯನಾ ಎನ್ನುವ ಪ್ರಶ್ನೆ ಮೂಡುತ್ತದೆ. ಈ ಚಿತ್ರದ ಎಲ್ಲಿಯೂ ಯಾರು ಬಹಿರಂಗವಾಗಿ ಮಾತನಾಡದೆ ಇದ್ದರೂ, ಈ ಚಿತ್ರದ ಪ್ಲಾನಿಂಗ್ ನಡೆಯುತ್ತಿರುವುದು ನಿಜ ಎನ್ನಲಾಗುತ್ತದೆ. ಅದೇನೇ ಇದ್ದರೂ ಈ ಮಟ್ಟಕ್ಕೆ ಕನ್ನಡ ಚಿತ್ರರಂಗ ಬೆಳೆಯಬೇಕು ಎನ್ನುವುದು ಎಲ್ಲರ ಆಸೆ.

ಮದಕರಿ ಹಿಂದೆ ದರ್ಶನ್, ಸುದೀಪ್ :

ಇನ್ನೊಂದು ಕಡೆ ನಟ ದರ್ಶನ್ ಕೂಡ ಮದಕರಿ ನಾಯಕರ ಬಗ್ಗೆ ಸಿನಮಾ ಮಾಡಲು ಮುಂದಾಗಿದ್ದಾರೆ. ರಾಕ್ ಲೈನ್ ವೆಂಕಟೇಶ್ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದು, ಡಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಇರಲಿದೆಯಂತೆ. ದರ್ಶನ್ ಹಾಗೂ ಸುದೀಪ್ ಇಬ್ಬರು ಒಂದೇ ಸಮಯಕ್ಕೆ ಮದಕರಿ ನಾಯಕರ ಬಗ್ಗೆ ಚಿತ್ರವನ್ನ ಮಾಡುವ ಮನಸ್ಸಿನಲ್ಲಿ ಇರೋದು ಸಹ ಇಂಡಸ್ಟ್ರಿಯಲ್ಲಿ ಕುತೂಹಲಕ್ಕೆ ಕಾರಣವಾಗಿದೆ. (ಎನ್.ಬಿ)

Leave a Reply

comments

Related Articles

error: