ಮೈಸೂರು

ನ.2 ರಿಂದ 5ರವರೆಗೆ ಮೈಸೂರು ಫ್ಯಾಷನ್ ವೀಕ್ : ಜಯಂತಿ ಬಲ್ಲಾಳ್

15 ಜನ ಡಿಸೈನರ್ : 32 ಜನ ರೂಪದರ್ಶಿಗಳು ಭಾಗಿ

ಮೈಸೂರು,ಅ.9 : ಮೈಸೂರು ಫ್ಯಾಷನ್ ವೀಕ್ ಸೀಸನ್ 4 ಅನ್ನು ನವೆಂಬರ್ ನಲ್ಲಿ ಏರ್ಪಡಿಸಲಾಗಿದ್ದು ಹಲವಾರು ಖ್ಯಾತ ಫ್ಯಾಷನ್ ಡಿಸೈನರ್ ಗಳು ಭಾಗಿಯಾಗಲಿದ್ದಾರೆ ಎಂದು ಆಯೋಜಕಿ ಜಯಂತಿ ಬಲ್ಲಾಳ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರು ಫ್ಯಾಷನ್ ಶೋ ತನ್ನದೇ ಆದ ಛಾಪು ಮೂಡಿಸಿದ್ದು ಈ ನಿಟ್ಟಿನಲ್ಲಿ ಈ ಸಾಲಿನ ಫ್ಯಾಷನ್ ಶೋ ವಿಶೇಷವಾಗಿದೆ. ದೆಹಲಿ, ಬಾಂಬೆ, ಚನ್ಹೈ ಸೇರಿದಂತೆ ಬೆಂಗಳೂರಿನಲ್ಲಿಯೂ ಅಡಿಷನ್ ನಡೆಸಲಾಗಿದ್ದು 32 ಜನ ಹುಡುಗಿಯರು ಹಾಗು 12 ಜನ ಹುಡುಗ ರೂಪದರ್ಶಿಗಳನ್ನು ಆಯ್ಕೆ ಮಾಡಲಾಗಿದೆ, ಇದೇ ಮೊದಲ ಬಾರಿಗೆ ಮಂಗಳಮುಖಿ ‘ಅಂಜಲಿ ಲಾಮಾ’ ಸೇರಿದಂತೆ ಬಿಗ್ ಟೌನ್ ಸೆಲೆಬ್ರಿಟಿಗಳು, ಅತ್ಯುತ್ತಮ ಮಾಡೆಲ್ ಗಳು ರ್ಯಾಂಪ್ ಮೇಲೆ ಹೆಜ್ಜೆ ಹಾಕಿಲಿದ್ದಾರೆ ಎಂದು ತಿಳಿಸಿದರು.

ನ.2 ರಿಂದ 5ರವರೆಗೆ ಸಂಜೆ ಸಮಯದಲ್ಲಿ ವಿಂಡ್ ಫ್ಲವರ್ ರೆಸಾರ್ಟ್ಸ್ ಅಂಡ್ ಸ್ಪಾ ನಲ್ಲಿ ನಡೆಯುವ ಫ್ಯಾಷನ್ ಶೋ ನಲ್ಲಿ  ಸಾಂಪ್ರದಾಯಿಕ ಉಡುಗೆಗಳನ್ನು ತಾವು ಡಿಸೈನ್ ಗೊಳಿಸಿದ್ದು ಅದರೊಂದಿಗೆ ಅರ್ಪಿತಾ,ಸ್ವಪ್ನಲ್ ಶಿಂಧೆ ಸೇರಿದಂತೆ 6 ಜನ ಡಿಸೈನರು ಅಂತಿಮಗೊಂಡಿದ್ದು  ಒಟ್ಟು 15 ಜನ ಡಿಸೈನರ್ ಗಳು ಈ ಪ್ರದರ್ಶನದಲ್ಲಿ ಭಾಗಿಯಾಗಲಿದ್ದು ಅವರುಗಳು ತಯಾರಿಸಿದ ವಿಶೇಷ ಉಡುಪು, ಆಭರಣಗಳನ್ನು ರೂಪದರ್ಶಿಗಳು ಪ್ರದರ್ಶಿಸಲಿದ್ದಾರೆ ಎಂದು ವಿವರಿಸಿದರು.

ಡಿಸೈನರ್ ಅರ್ಪಿತಾ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: