ಮೈಸೂರು

ಮೈಸೂರಿನಲ್ಲಿ ಮೊದಲ ಬಾರಿಗೆ ಮೆಡಿಟೇರಿಯನ್ ಕ್ಯುಸಿನ್ಸ್ ಇವೆಂಟ್

2016ಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಿಸುವ ಸಲುವಾಗಿ ಮೈಸೂರಿನ ರ್ಯಾಡಿಸನ್ ಬ್ಲೂ ಪ್ಲಾಜಾ ವತಿಯಿಂದ ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಮೆಡಿಟೇರಿಯನ್ ಕ್ಯುಸಿನ್ಸ್ ಇವೆಂಟ್ ಆಯೋಜಿಸಲಾಗಿದೆ ಎಂದು ಹೋಟೆಲ್‍ನ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ವಿಜಯ್ ಸೆಲ್ವರಾಜ್ ತಿಳಿಸಿದರು.

ಬುಧವಾರ ಹೋಟೆಲ್‍ನ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋಟೆಲ್‍ನಲ್ಲಿ ಕಳೆದ ಎರಡು ವರ್ಷಗಳಿಂದಲೂ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಲಾಗುತ್ತಿದೆ. 2015ರಲ್ಲಿ ರೆಡ್ ಕಾರ್ಪೆಟ್, 2016ರಲ್ಲಿ ರೆಟ್ರೋ ಇವೆಂಟ್ ಆಯೋಜಿಸಲಾಗಿತ್ತು. ಈ ಬಾರಿ ವಿಶೇಷವಾದ ಕಾರ್ನಿವಲ್ ಇವೆಂಟ್ ಆಯೋಜಿಸಲಾಗಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಮೆಡಿಟೇರಿಯನ್ ಕ್ಯುಸಿನ್ಸ್ ಆಯೋಜಿಸಲಾಗಿದೆ. 100ಕ್ಕೂ ಹೆಚ್ಚು ಬಗೆಯ ವಿಶ್ವದ ಎಲ್ಲ ದೇಶಗಳ ತಿಂಡಿ ತಿನಿಸುಗಳು ಲಭ್ಯವಿರಲಿದ್ದು, ಹೊಸ ವರ್ಷವನ್ನು ಮತ್ತಷ್ಟು ವಿಶೇಷವಾಗಿಸಲಿದೆ ಎಂದು ಹೇಳಿದರು.

ಹೊಸ ವರ್ಷವನ್ನು ವಿಶೇಷವಾಗಿ ಸಂಭ್ರಮಿಸಲು ಬರುವವರಿಗೆ ನಿರಾಸೆಯಾಗದಂತೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇಡೀ ರಾತ್ರಿ ನಡೆಯಲಿವೆ. ಮೂರು ವಿಭಾಗಗಳಲ್ಲಿ ಫ್ಯಾಷನ್ ಶೋ ನಡೆಯಲಿದ್ದು ಬೆಂಗಳೂರಿನ ಮಾಡೆಲ್‍ಗಳು ಭಾಗವಹಿಸಲಿದ್ದಾರೆ. ಎರಡು ಡ್ಯಾನ್ಸ್ ಇವೆಂಟ್, ಫೈರ್ ವರ್ಕ್, ಲೈವ್ ಮ್ಯೂಸಿಕ್ ಆಯೋಜಿಸಲಾಗಿದ್ದು, ಡಿಜೆಗಳಾದ ನಿಕ್, ಚಿರಾಗ್, ಕೌಶಲ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅಲ್ಲದೆ ಮಕ್ಕಳಿಗೆಂದೇ ವಿಶೇಷವಾದ ಕಿಡ್ಸ್ ಏರಿಯಾ ನಿರ್ಮಿಸಲಾಗಿದೆ.

ಕಾರ್ನಿವಲ್ ಇವೆಂಟ್ ಹೋಟೆಲ್‍ನ ಮೆಫಿಲ್‍ನಲ್ಲಿ, ಕ್ಲಬ್ ನೈಟ್ ಇವೆಂಟ್ ಬಾಲ್ ರೂಮ್‍ನ ಮಿಸ್ಟ್‍ನಲ್ಲಿ ನಡೆಯಲಿದೆ. ಕಪಲ್ ಗೆ 8000 ಹಾಗೂ ಒಬ್ಬರಿಗೆ 5000 ರೂ. ಪ್ರವೇಶ ದರ ನಿಗದಿ ಮಾಡಲಾಗಿದೆ. ಪಾನೀಯ, ತಿಂಡಿ ತಿನಿಸು ಸೇರಿದಂತೆ ಎಲ್ಲವೂ ಅನಿಯಮಿತ. ಎಷ್ಟು ಬೇಕಾದರೂ ತಿನ್ನಬಹುದು ಎಂದ ಅವರು, ಕಾರ್ಯಕ್ರಮಕ್ಕೆ ಸುಮಾರು 500 ರಿಂದ 700 ಮಂದಿ ಆಗಮಿಸುವ ನಿರೀಕ್ಷೆ ಇದ್ದು, ಈಗಾಗಲೇ ಮೆಫಿಲ್‍ಗೆ 100 ಹಾಗೂ ಮಿಸ್ಟ್ ಇವೆಂಟ್‍ಗೆ 62 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಇವೆಂಟ್ ಪಾರ್ಟ್‍ನರ್ ಸುರೇಶ್, ಗಣೇಶ್, ಶ್ರೀಹರಿ, ಕೌಶಲ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: