
ದೇಶ
ಮಾ.31ರ ನಂತರ ಹಳೆಯ ನೋಟು ಇಟ್ಟುಕೊಳ್ಳುವುದು ಕಾನೂನುಬಾಹಿರ
ಹಳೇ ನೋಟುಗಳ ಬಂದ್ ಸಂಬಂಧ ಮತ್ತೊಂದು ಸುಗ್ರೀವಾಜ್ಞೆಯನ್ನು ಹೊರಡಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಮಾರ್ಚ್ 31ರ ನಂತರ ಗರಿಷ್ಠ 10 ಹಳೇ ನೋಟುಗಳನ್ನು ಇಟ್ಟುಕೊಳ್ಳಬಹುದು. ಅದಕ್ಕಿಂತ ಹೆಚ್ಚು ಇಟ್ಟುಕೊಂಡಲ್ಲಿ 10 ಪಟ್ಟು ದಂಡ ವಿಧಿಸಲಾಗುವುದು ಮತ್ತು 4 ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯೂ ಇದೆ. ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಡಿ.30ರ ಬಳಿಕ ಹಳೇ ನೋಟುಗಳನ್ನು ಆರ್ಬಿಐ ಸೂಚಿಸಿದ ಬ್ಯಾಂಕ್ಗಳಲ್ಲಿ ಮಾತ್ರ ಮಾರ್ಚ್ 31ರೊಳಗೆ ಜಮೆ ಮಾಡಿಕೊಳ್ಳಬಹುದು ಎನ್ನಲಾಗಿದೆ.
ಕಪ್ಪುಹಣ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನ.8ರಂದು 500 ಮತ್ತು 1000 ರೂ. ನೋಟುಗಳನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದರು. ಹಳೇ ನೋಟುಗಳನ್ನು ಬ್ಯಾಂಕ್ನಲ್ಲಿ ಜಮೆ ಮಾಡಿಕೊಳ್ಳಲು ಡಿ.30ರವರೆಗೆ ಕಾಲಾವಕಾಶ ನೀಡಿದ್ದರು. ಈ ಕಾಲಾವಕಾಶ ಮುಗಿಯುತ್ತಾ ಬಂದಿದ್ದು, ಮಾ.30ರವರೆಗೆ ಆರ್ಬಿಐ ಸೂಚಿಸಿದ ಬ್ಯಾಂಕ್ಗಳಲ್ಲಿ ನೋಟುಗಳನ್ನು ಜಮೆ ಮಾಡಿಕೊಳ್ಳಬಹುದು.